ಬಯಲು ಭಾಗದ ಸಹಕಾರ ಸಂಘದ ಅಭಿವೃದ್ಧಿ ಗುರಿ

6 TKE 2( D.S)
Published on

ತರೀಕೆರೆ: ಮಲೆನಾಡು ಭಾಗದ ಪಿಎಸಿಎಸ್‌ಗಳಂತೆ ಬಯಲು ಸೀಮೆ ಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲೂಕಿನ ಗೋಪಾಲ ಕಾಲನಿ ಹಾಗೂ ಅಜ್ಜಂಪುರ ತಾಲೂಕಿನ ನಾರಾಯಣಪುರ, ಹೆಬ್ಬೂರು, ಮತ್ತು ಗೌರಾಪುರ ಹಾಲು ಉತ್ಪಾದಕರ ಸಂಘದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಲಾ 1 ಲಕ್ಷ ರೂ.ಗಳ ಚೆಕ್ ವಿತರಿಸಿ ಮಾತನಾಡಿ, ರೈತರ ಸರ್ವಾಂಗೀಣ ಅಭಿವೃದ್ಧಿಗೆ ಕೃಷಿ ಚಟುವಟಿಕೆಗಳು ಎಷ್ಟು ಮುಖ್ಯವೋ. ಹೈನುಗಾರಿಕೆಯೂ ಸಹ ಅಷ್ಟೇ ಸಹಕಾರಿ. ಈ ನಿಟ್ಟಿನಲ್ಲಿ ರೈತರು ಕೃಷಿ ಕಾರ್ಯದ ಜತೆ ಹೈನೋದ್ಯಮಕ್ಕೂ ಒತ್ತು ನೀಡಿ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.

ಗೋಪಾಲ ಕಾಲನಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್.ಜೆ.ಪ್ರಶಾಂತ್, ನಿರ್ದೇಶಕರಾದ ಗೀತಮ್ಮ, ಓಬಳಯ್ಯ, ಕೃಷ್ಣಮೂರ್ತಿ, ಕೆಂಪೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net