ಪದೇಪದೆ ಅವಿಶ್ವಾಸ ನಿರ್ಣಯದಿಂದ ಅಭಿವೃದ್ಧಿ ಕುಂಠಿತ

vokkaligara sangha
Published on

ಬೆಂಗಳೂರು: ಎಲ್ಲ ಸದಸ್ಯರಿಂದ ಪೂರ್ಣ ಸಹಕಾರ ದೊರೆತರೆ ಹಿರಿಯರು ಕಟ್ಟಿ ಬೆಳೆಸಿದ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ತುಂಬ ಅನುಕೂಲವಾಗಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್​. ಬಾಲಕೃಷ್ಣ ಬಣ ಪ್ರತಿಪಾದಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆರ್​.ಪ್ರಕಾಶ್​ ಮಾತನಾಡಿ, ಸಂಘದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯತ್ತಿವೆ.ಆದರೆ, ಇದನ್ನು ಸಹಿಸದ ಸಂಘದ ಕೆಲ ನಿರ್ದೇಶಕರಿಂದ ಪೂರ್ಣ ಸಹಕಾರ ಸಿಗುತ್ತಿಲ್ಲ. ಇದು ಬೇಸರದ ಸಂಗತಿಯಾಗಿದೆ. ಎಲ್ಲ ಸದಸ್ಯರು ಪ್ರೋತ್ಸಾಹ ನೀಡಿದರೆ ಈಗ ಕೈಗೆತ್ತಿಕೊಂಡಿರುವ ಕಾರ್ಯಗಳ ಜತೆಗೆ ಸಂದ ಆಡಳಿತ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯಲಿವೆ.ಹಾಗಾಗಿ, ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಕಳೆದ ಜು.4ರಂದು ಸಂದ ನೂತನ ಅಧ್ಯರಾಗಿ ಸಿ.ಎನ್​.ಬಾಲಕೃಷ್ಣ ಹಾಗೂ ಅವರ ತಂಡದವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು. ಪದಾಧಿಕಾರಿಗಳು ಆಯ್ಕೆಯಾದ ಕೇವಲ 14 ದಿನಕ್ಕೆ ಎದುರಾಳಿ ತಂಡವು ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್​ ನೀಡಿದ್ದರು. ಆದರೆ, ಸಂಘದ ಕಾರ್ಯಕಾರಿ ಸಮಿತಿ ಈ ನೋಟಿಸ್​ ತಿರಸ್ಕರಿಸಿತ್ತು. ಜು.30ಕ್ಕೆ ಸಭೆ ನಡೆಸಿದ ಕೆಲ ಸದಸ್ಯರು ಆ.9ರಂದು ತಾವೇ ಅವಿಶ್ವಾಸ ರ್ನಿಣಯದ ಕುರಿತು ನಡೆಸುವುದಾಗಿ ನೋಟಿಸ್​ ನೀಡಿದ್ದರು. ಆಗ ಸಂಘದ ಹಾಲಿ ಪದಾಧಿಕಾರಿಗಳು ನಗರದ ಸಿವಿಲ್​ ಕೋರ್ಟ್​ ಮೊರೆ ಹೋಗಿದ್ದರು. ವಾದ&ಪ್ರತಿವಾದ ನಡೆದ ಬಳಿಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ತಂಡಗಳಿಗೆ ಸಿವಿಲ್​ ನ್ಯಾಯಾಲಯ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೊರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯೂ ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್​, ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಎಂ.ಪುಟ್ಟಸ್ವಾಮಿ ಮಾತನಾಡಿ, 2 ತಿಂಗಳಲ್ಲಿ ಸಂದ ನೌಕರರಿಗೆ ಆರನೇ ವೇತನ ಆಯೋಗದಂತೆ ವೇತನ ಪರಿಷ್ಕರಣೆ ಮಾಡಲಾಗಿದೆ. ತಿಂಗಳಿನ ಕೊನೆಯ ದಿನಾಂಕದಂದು ವೇತನ ಪಾವತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮವನ್ನು ಅನುಷ್ಠಾನಕ್ಕೆ ತಂದಿದ್ದು, ನೌಕರರು ಮತ್ತು ಸಿಬ್ಬಂದಿಗೆ ಅನುಕೂಲವಾಗಿದೆ. ಅರ್ಜಿದಾರರು ಅಥವಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ರ್ನಿಣಯ ಮಂಡಿಸಲು ಸ್ವತಂತ್ರರು. ಆದರೆ, ಪದೇಪದೆ ಅವಿಶ್ವಾಸ ನಿರ್ಣಯ ಮಂಡನೆಯಿಂದ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಲಿವೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಿ.ದೇವರಾಜು, ನಿರ್ದೇಶಕರಾದ ಡಾ.ಎಂ.ಬಿ.ಮಂಜೇಗೌಡ, ಡಾ.ಟಿ.ಎಚ್​.ಆಂಜನಪ್ಪ, ಲೋಕೇಶ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net