ಅಭಿವೃದ್ಧಿಗೆ ಪತ್ರಕರ್ತರ ಪಾತ್ರ ಮುಖ್ಯ

13CKD3
ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಡಾ. ಪ್ರಭಾಕರ ಕೋರೆ ಉದ್ಘಾಟಿಸಿದರು. ಮಹಾಂತೇಶ ಕವಟಗಿಮಠ, ಸುಭಾಷ ಸಂಪಗಾಂವಿ, ಗೋಪಾಲಕೃಷ್ಣ ಗೌಡರ ಇದ್ದರು.
Published on

ಚಿಕ್ಕೋಡಿ: ಪತ್ರಕರ್ತರು ಸಮಾಜದ ಓರೆಕೋರೆಗಳನ್ನು ತಿದ್ದುವ ಭರದಲ್ಲಿ ಸುಳ್ಳು ಮಾಹಿತಿ ನೀಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ರತಿ ವರದಿಯನ್ನು ಪರಾಮರ್ಶಿಸಿ ಪ್ರಕಟಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಮಹಾವಿದ್ಯಾಲಯದ ಸಭಾಭವನದಲ್ಲಿ ಚಿಕ್ಕೋಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸೇರಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೆಗಳು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಕರ್ತರು ಸರಿಯಾದ ದಾರಿಯಲ್ಲಿ ನಡೆದರೆ ದೇಶವೇ ಸರಿಯಾದ ದಾರಿಯಲ್ಲಿ ನಡೆಯುತ್ತದೆ. ದೇಶದ ಸಮಗ್ರ ಅಭಿವೃದ್ಧಿಗೆ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ. ಸಕಾರಾತ್ಮಕ ಸುದ್ದಿಗಳನ್ನು ಕೊಡುವ ಮೂಲಕ ಯುವಜನಾಂಗವನ್ನು ಪ್ರೇರೇಪಿಸಬೇಕು ಎಂದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಪತ್ರಿಕೆಗೆ ತನ್ನದೆ ಮಹತ್ವ ಇದೆ. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ. ಪತ್ರಕರ್ತರ ಸಮಸ್ಯೆಗಳನ್ನು ಹಂತ- ಹಂತವಾಗಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಚಿಕ್ಕೋಡಿಯ ಬಿಡಿ ವರದಿಗಾರ ಸುಧಾಕರ ತಳವಾರ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಪತ್ರಕರ್ತರ ಸಂಘದಿಂದ 55 ಸಾವಿರ ರೂ. ಚೆಕ್ ವಿತರಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ವಿಜಯ ಕವಟಗಿ ಅವರನ್ನು ಸನ್ಮಾನಿಸಲಾಯಿತು.

ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ಡಿವೈಎಸ್ಪಿ ಗೋಪಾಲಕೃಷ ್ಣ ಗೌಡರ, ಪ್ರಾಚಾರ್ಯ ಪ್ರಸಾದ ರಾಂಪುರೆ, ರಾಜು ಸಂಕೇಶ್ವರಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ, ಶಿಕ್ಷಕರಾದ ಚಂದ್ರಶೇಖರ ಅರಬಾವಿ, ಎನ್.ಜಿ.ಪಾಟೀಲ, ಪತ್ರಕರ್ತರಾದ ಮಹಾವೀರ ಮೆಕ್ಕಳಕಿ, ಸುಭಾಷ ದಲಾಲ, ವಿರೂಪಾಕ್ಷಿ ಕವಟಗಿ, ಮಹಾದೇವ ಪೂಜೇರಿ, ಸಂಜು ಕಾಂಬಳೆ, ಕಾಶೀನಾಥ ಸುಳಕೂಡೆ, ಸಂತೋಷ ಕಾಮತ, ಚಂದ್ರಶೇಖರ ಚಿನಕೇಕರ, ಡಿ.ಕೆ.ಉಪ್ಪಾರ, ರವಿ ಮಂಗಾವೆ, ಎಂ.ಬಿ.ಚಿಂಚಣಿ, ಸಂಜಯ ಅವಘಡಿ, ಮಹಾದೇವ ಪಾಟೀಲ, ಲಾಲಸಾಹೇಬ ತಟಗಾರ, ಮಹಾಂತೇಶ ಮಠಪತಿ, ತಾತ್ಯಾಸಾಹೇಬ ಕಾಮತ ಇದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಕೋಳಿ ಸ್ವಾಗತಿಸಿದರು. ಉಪನ್ಯಾಸಕಿ ಗಂಗಾ ಅರಬಾವಿ ನಿರೂಪಿಸಿದರು. ಉಪನ್ಯಾಸಕ ಸಚಿನ ಮೆಕ್ಕಳಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net