ಚಿಕ್ಕಜಾಜೂರು: ಚುನಾವಣೆಯವರೆಗೂ ರಾಜಕಾರಣ, ಬಳಿಕ ಗ್ರಾಮದ ಅಭಿವೃದ್ಧಿ ನಮ್ಮ ಧ್ಯೇಯ ಆಗಬೇಕು ಎಂದು ಗ್ರಾಪಂ ಸದಸ್ಯ, ಗ್ರಾಮದ ಮುಖಂಡ ಪಿ.ಎಸ್.ಮೂರ್ತಿ ತಿಳಿಸಿದರು.
ಚಿಕ್ಕಜಾಜೂರು ಗ್ರಾಮ ಪಂಚಾಯತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಗುರಿ ಹಳ್ಳಿಯ ಪ್ರಗತಿ ಆಗಬೇಕು. ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶನ ಬಹಳ ಅಗತ್ಯ ಎಂದರು.
ಯಾವುದೇ ಊರು, ಪಟ್ಟಣ, ನಗರದ ಅಭಿವೃದ್ಧಿಗೆ ಸ್ಥಳೀಯ ಜನರಲ್ಲಿ ಏಕಾಭಿಪ್ರಾಯ ಜತೆಗೆ ಒಗ್ಗಟ್ಟಿನ ಹೋರಾಟ ಅಗತ್ಯ. ಈ ನಿಟ್ಟಿನಲ್ಲಿ ಸಾಗಿದವರ ಊರು ಸಮಗ್ರವಾಗಿ ಅಭಿವೃದ್ಧಿ ಕಾಣದಲಿದೆ. ಜನರ ಬದುಕು ನೆಮ್ಮದಿಯಿಂದ ಇರಲಿದೆ ಎಂದು ಹೇಳಿದರು.
ಬಹಳಷ್ಟು ಹಳ್ಳಿಗಳಲ್ಲಿ ಗ್ರಾಪಂ ಚುನಾವಣೆ ಹೆಚ್ಚು ದ್ವೇಷಕ್ಕೆ ಕಾರಣವಾಗುತ್ತಿದೆ. ಗೆದ್ದವರು-ಸೋತವರು ಧೀರ್ಘ ಕಾಲ ಪರಸ್ಪರ ವಿರೋಧಿಗಳ ರೀತಿ ವರ್ತಿಸುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ನೆಮ್ಮದಿಗೆ ಭಂಗ ಉಂಟಾಗಲಿದೆ. ಆದ್ದರಿಂದ ಚುನಾವಣೆ ಬಳಿಕ ರಾಜಕಾರಣ ಮರೆತು ಗ್ರಾಮದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಮುಂದಾಗಬೇಕು. ಇದರಿಂದ ವೈಯಕ್ತಿಕ ಜತೆಗೆ ಹಳ್ಳಿಯೂ ಪ್ರಗತಿ ಆಗಲಿದೆ ಎಂದು ಕಿವಿಮಾತು ಹೇಳಿದರು.
ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ 14 ಕೋಟಿ ರೂ. ಅನುದಾನವನ್ನು ಶಾಸಕ ಎಂ.ಚಂದ್ರಪ್ಪ ತಂದಿದ್ದು, ಇನ್ನೂ ಹೆಚ್ಚು ಹಣ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ನಾವೆಲ್ಲರೂ ಒಗ್ಗೂಡಿ ಮನವಿ ಸಲ್ಲಿಸೋಣ ಎಂದರು.
ಗ್ರಾಪಂ ಸದಸ್ಯರಾದ ಎಂ.ಶ್ರೀಕಾಂತ್, ಗಂಗಾಧರಪ್ಪ ಮಾತನಾಡಿ, ಪ್ರಸ್ತುತ ಎಲ್ಲೆಡೆಯೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ಜಿದ್ದಾಜಿದ್ದಿ ವಾತಾವರಣ ಹಳ್ಳಿಗಳಲ್ಲಿ ಸೃಷ್ಠಿ ಆಗಿರುತ್ತದೆ. ಅದನ್ನು ತಿಳಿಗೊಳಿಸಲು ಇಂತಹ ಸಭೆಗಳು ಬಹಳ ಅಗತ್ಯ ಎಂದು ಹೇಳಿದರು.
ದರು. ಮುಖಂಡರಾದ ಜಿ.ಕೆ.ಯೋಗೇಶ್, ಎ.ಆರ್.ಸುರೇಶ್, ಕೆ.ರವಿಪ್ರಕಾಶ್, ವಿಜಯಕುಮಾರ್ ಇತರರಿದ್ದರು.