

ತರೀಕೆರೆ: ಪರರ ಹಿತ ಕಾಯುವ ಸಲುವಾಗಿ ಮಿಡಿಯುವ ಹೃದಯ, ಎಲ್ಲರೊಂದಿಗೆ ಬೆರೆಯುವ ಗುಣದ ಜತೆ ಸಾಮಾಜಿಕ ಕಾಳಜಿ ಇದ್ದಾಗ ಮಾತ್ರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ವಿವಿಧ ಯೋಜನೆ ಅನುಷ್ಟಾಗೊಳಿಸುವ ಮೂಲಕ ಜನ ಸಾಮಾನ್ಯರ ಜೀವನ ಸುಧಾರಣೆಗೆ ಶ್ರಮಿಸುತ್ತಿದ್ದರೆ. ವಿವಿಧ ಸಂಘ ಸಂಸ್ಥೆಗಳು ಮಾನವೀಯ ನೆಲೆಗಟ್ಟಿನಲ್ಲಿ ಸೇವಾ ಕಾರ್ಯಕೈಗೊಳ್ಳುತ್ತಿವೆ. ಉಳ್ಳವರು ಉದಾರತೆ ತೋರಿ ಅಶಕ್ತರ ಬದುಕಿಗೆ ಆಸರೆಯಾದರೆ ಸಂಘ ಸಂಸ್ಥೆಗಳು ಪರಿಸರ ಕಾಳಜಿ, ಶಿಕ್ಷಣ,ಆರೋಗ್ಯ,ಬಡವರ ಕಲ್ಯಾಣದ ಜತೆಗೆ ವಿವಿಧ ಕ್ಷೇತ್ರದ ಪ್ರಗತಿಗೆ ಹೆಗಲು ನೀಡುತ್ತಿವೆ ಎಂದರು.
ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಟಿ.ಎಂ.ಹರೀಶ್, ಉಪಾಧ್ಯಕ್ಷರಾಗಿ ಟಿ.ವಿ.ಪ್ರದೀಪ್‌ಕುಮಾರ್, ಕಾರ್ಯದರ್ಶಿಯಾಗಿ ಏಜಾಜ್ ಪಾಷ, ಖಜಾಂಚಿಯಾಗಿ ಟಿ.ಎಂ.ನವೀನ್ ಅಧಿಕಾರ ಸ್ವೀಕರಿಸಿದರು.
ಎಸಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಉಪ ರಾಜ್ಯಪಾಲ ಎಚ್.ಎಂ.ತಾರಾನಾಥ್, ಪ್ರಮುಖರಾದ ಟಿ.ಡಿ.ರವಿಕುಮಾರ್, ಡಾ.ಟಿ.ಎಂ.ದೇವರಾಜ್, ಎಂ.ಬಿ.ಗೋಪಾಲಗೌಡ, ಕೆ.ಟಿ.ದೇವಪ್ಪ, ಬಿ.ಎನ್.ವೆಂಕಟೇಶ್, ಎ.ಎಸ್.ಸಾಯಿಕುಮಾರ್ ಮತ್ತಿತರರಿದ್ದರು.