

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬುದ್ಧಿವಂತರ ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳು ನಡೆಸುತ್ತಿರುವ ಜನೋಪಯೋಗಿ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳು ರಾಜ್ಯಕ್ಕೆ ವಾದರಿಯಾಗಿದ್ದು ರಾಮ ರಾಜ್ಯದ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಪೂರಕವಾಗಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಜೂರು ಗ್ರಾ.ಪಂ.ನ ನವೀಕೃತ ಸಭಾಭವನ ಉದ್ಘಾಟನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ವೆಬ್‌ಸೈಟ್ ಅನಾವರಣ, ಸ್ಮಾರ್ಟ್ ಎಜುಕೇಶನ್‌ಗೆ ಪೂರಕವಾಗಿ ಅಂಗನವಾಡಿಗಳಿಗೆ ಸವಲತ್ತು ವಿತರಿಸಿ ಶುಕ್ರವಾರ ವಾತನಾಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಾತನಾಡಿ, ಸ್ಥಳೀಯಾಡಳಿತದಿಂದ ಹಿಡಿದು ಸಂಸದರವರೆಗಿನ ಜನಪ್ರತಿನಿಧಿಗಳೆಲ್ಲರೂ ಪಕ್ಷ ಭೇದ ಮರೆತು ಗ್ರಾಮ ಸರ್ಕಾರಕ್ಕೆ ಮತ್ತಷ್ಟು ಬಲ ತುಂಬುತ್ತಾ ಬಂದಿದ್ದು ಇಲ್ಲಿನ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಸಹಕಾರ ದೊರಕಬೇಕಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುವಾರ್ ಪುತ್ತೂರು, ವಾಜಿ ಸಚಿವ ವಿನಯಕುವಾರ್ ಸೊರಕೆ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ತಹಸೀಲ್ದಾರ್ ಪ್ರತಿಭಾ ಆರ್., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್‌ಕುವಾರ್ ಕೊಡವೂರು, ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ತಾಪಂ ಇಒ ಜೇಮ್ಸ್ ಡಿಸಿಲ್ವ, ತಾಲೂಕು ಆಡಳಿತಾಧಿಕಾರಿ ಪೂರ್ಣಿವಾ, ಶ್ಯಾಮಲಾ ಸಿ.ಕೆ., ಗ್ರಾಪಂ. ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಪಿಡಿಒ ವಿಲಾಸಿನಿ ಉಪಸ್ಥಿತರಿದ್ದರು.
ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸಾದ್ ಭಂಡಾರಿ ವಂದಿಸಿದರು. ಆಶಾ ಆರ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.