ಅಕ್ಷರ ಕ್ರಾಂತಿಯಿಂದ ಅಭಿವೃದ್ಧಿ ಸಾಧ್ಯ

dvd education
ದೇವದುರ್ಗದ ಮೌಲನಾ ಆಜಾದ್ ಮಾದರಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಪರಶುರಾಮ ಯರಗೋಡ, ಶಿಕ್ಷಣ ಪ್ರೇಮಿ ಏಜಾಜ್ ಅಲಿ ಖಾಜಿ, ಶಿಕ್ಷಕರಾದ ಜಿ.ಶೀಲಾ, ಗೋಪಲ ನಾಯಕ, ಸುರೇಶ ರೆಡ್ಡಿ, ಅಕ್ಬರ್, ಪಾರ್ವತಿ ಇತರರಿದ್ದರು.
Published on

ದೇವದುರ್ಗ: ಆಧುನಿಕ ಯುಗದಲ್ಲಿ ಜ್ಞಾನಕ್ಕೆ ಮಹತ್ವದ ಸ್ಥಾನವಿದ್ದು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಅಕ್ಷರ ಕ್ರಾಂತಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಶಿಕ್ಷಕ ಪರಶುರಾಮ ಯರಗೋಡ ಹೇಳಿದರು.

ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲನಾ ಆಜಾದ್ ಮಾದರಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕಿದೆ. ಸರ್ವರಿಗೂ ಸಮಾನ ಶಿಕ್ಷಣ ಕೊಡಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರಯೋಜನ ಪಡೆಯಬೇಕು ಎಂದರು. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿಕ್ಷಣ ಪ್ರೇಮಿ ಏಜಾಜ್ ಅಲಿ ಖಾಜಿ, ಶಿಕ್ಷಕರಾದ ಜಿ.ಶೀಲಾ, ಗೋಪಲ ನಾಯಕ, ಸುರೇಶ ರೆಡ್ಡಿ, ಅಕ್ಬರ್, ಪಾರ್ವತಿ, ಮುಖಂಡರಾದ ಫಾರೂಕ್ ಅನ್ವರ್, ಮಲ್ಲಿಕಾರ್ಜುನ ಸಿಂಗ್ರಿ, ಫಾರೂಕ್ ಜಿ., ಇಸ್ಮಾಯಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net