ಅಭಿವೃದ್ಧಿ ಪಥದಲ್ಲಿ ಸೊಗಲ

6MURAGOD1
Published on

ಮುರಗೋಡ: ಸುೇತ್ರ ಸೊಗಲ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಭಕ್ತರ ಆಸೆ ಈಡೇರುತ್ತಿದೆ ಎಂದು ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಹೇಳಿದರು.

ಸಮೀಪದ ಸೊಗಲದಲ್ಲಿ ಸೋಮೇಶ್ವರ ಮತ್ತು ಶಿವಪಾರ್ವತಿಯರ ಮೂರ್ತಿಗಳ ಪುನರ್​ ಪ್ರತಿಷ್ಠಾಪನೆ, ಶಿಲಾ ಮಂಟಪ,ದೇವಸ್ಥಾನಗಳ ಮೇಲ್ಛಾವಣಿಯ ಉದ್ಘಾಟನೆ ಹಾಗೂ ಜೀರ್ಣೊದ್ದಾರ ಸಮಿತಿ ಸುವರ್ಣ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಲ ದೀಪೋತ್ಸವದಲ್ಲಿ ಮಾತನಾಡಿದರು. ಶಿವಪಾರ್ವತಿಯ ದರ್ಶನ ಭಾಗ್ಯ ಭಕ್ತರಿಗೆ ಸಿಗಬೇಕು. ಸರ್ಕಾರ ಪ್ರವಾಸಿ ತಾಣವಾಗಿಸಲು ಶ್ರಮಿಸಲಿ ಎಂದರು.

ಸಾಧಕರನ್ನು ಸನ್ಮಾನಿಸಲಾಯಿತು. ಬೆಲಹೊಂಗಲ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರವಿ ಕೊಟಾರಗಸ್ತಿ, ನಟ ಸಿ.ಕೆ. ಮೆಕ್ಕೆದ ಮಾತನಾಡಿದರು. ಸಮಿತಿ ಅಧ್ಯ ವೀರನಗೌಡ ಸಂಗಣ್ಣವರ ಅಧ್ಯತೆ ವಹಿಸಿದ್ದರು. ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪತ್ರಕರ್ತ ಈಶ್ವರ ಹೋಟಿ, ನಿಂಗಯ್ಯ ಪೂಜೇರಿ, ಸುರೇಶ ಕೆ., ಪ್ರಕಾಶ ಮೂಗಬಸವ, ಸೋಮಪ್ಪ ಮೂಗಬಸವ, ಗ್ರಾಪಂ ಅಧ್ಯೆ ಶ್ರೀದೇವಿ ತಳವಾರ,

ಎಸ್​.ಎಸ್​. ಮಲ್ಲಣ್ಣವರ, ಮಲ್ಲಿಕಾರ್ಜುನ ವಿವೇಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net