ಗುತ್ತಲದ ದೊಡ್ಡ ಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ

Guttal kere bagina
Published on

ಗುತ್ತಲ: ಗುತ್ತಲದ ಐತಿಹಾಸಿಕ ದೊಡ್ಡ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಪಟ್ಟಣಕ್ಕೆ ಕುಡಿಯುವ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಈ ಕೆರೆಯ ನೀರು ಬಳಸಿಕೊಳ್ಳುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಪಟ್ಟಣದ ಐತಿಹಾಸಿಕ ದೊಡ್ಡ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ರುದ್ರಪ್ಪ ಲಮಾಣಿ, ಈ ಬಾರಿ ಕೆರೆ ಬೇಗನೆ ತುಂಬಿದೆ. ಶಿವಮೊಗ್ಗ ಬಳಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ದುರಸ್ತಿ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಯುವಿಕೆ ಸ್ಥಗಿತಗೊಂಡಿದೆ. ಕೆಲವೇ ದಿನಗಳಲ್ಲಿ ಮತ್ತೆ ನೀರು ಹರಿಯಲಿದೆ. ಆಗ ಕೆರೆ ಸಂಪೂರ್ಣವಾಗಿ ತುಂಬಲಿದೆ ಎಂದರು.

ಪಪಂಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ನೂತನ ಅಧ್ಯಕ್ಷೆ ಮಾಳವ್ವ ಗೊರವರ ಹಾಗೂ ಸದಸ್ಯರೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ರ್ಚಚಿಸಿದರು.

ಪಪಂ ಅಧ್ಯಕ್ಷೆ ಮಾಳವ್ವ ಗೊರವರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಪಪಂ ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಚನ್ನಪ್ಪ ಕಲಾಲ, ಜಿಜಿಇ ಸೊಸಾಯಿಟಿಯ ಅಧ್ಯಕ್ಷ ಆರ್.ಎಸ್. ಮನ್ನಂಗಿ, ಉಪಾಧ್ಯಕ್ಷ ಪ್ರಕಾಶ ಚಕ್ಕಿ, ನಿರ್ದೇಶಕರಾದ ಬಸಣ್ಣ ಎಲಿಗಾರ, ಪಿ.ಎಂ. ಕೋವಳ್ಳಿಮಠ, ಸಂಗಯ್ಯಸ್ವಾಮಿ ಭೂಸನೂರಮಠ, ಪಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಮಹ್ಮದ್​ಹನೀಫ್ ರಿತ್ತಿ, ಶಕುಂತಲಾ ಗುತ್ತಲ, ದೀಪಾ ಭರಡಿ, ಪಾರವ್ವ ಲಮಾಣಿ, ಖಲೀಲಹ್ಮದ ಖಾಜಿ, ರುದ್ರಪ್ಪ ಹಾದಿಮನಿ, ಮಂಜುನಾಥ ದಪ್ಪೇರ, ಸಂತೋಷ ಲಮಾಣಿ, ನಿಂಗರಾಜ ನಾಯಕ, ಹನುಮಂತ ಅಗಸಿಬಾಗಿಲದ, ವಿನೋದ ಗುತ್ತಲ, ಮಲ್ಲಪ್ಪ ಚಿಂದಿ, ಗುಡ್ಡಪ್ಪ ಗೊರವರ, ಪಿ.ಎನ್. ಹೇಮಗಿರಿಮಠ, ಶಂಕ್ರಪ್ಪ ಗೌಳಿ, ಲಿಂಗೇಶ ಬೆನ್ನೂರ, ಫೀರಸಾಬ ಹಾನಗಲ್, ದತ್ತಾತ್ರೇಯ ಭಂಗಿ, ರಮೇಶ ಮಾಗಳ, ಪಪಂ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಡಮನಿ, ಪಿಎಸ್, ಪಿಎಸ್​ಐ ಬಸನಗೌಡ ಬಿರಾದಾರ, ಪಪಂ ಇಂಜಿನಿಯರ್ ಸುರೇಶ ಚಲವಾದಿ ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net