

ಬಾದಾಮಿ: ಪೂಜ್ಯ ವಿರೇಂದ್ರ ಹೆಗ್ಗಡೆಯವರು ನಮ್ಮೂರಿಗೆ ಕೆರೆ ಮಾಡಲು ಪ್ರಸಾದ ರೂಪದಲ್ಲಿ ಮಂಜೂರಾತಿ ನೀಡಿದ್ದು, ನಮ್ಮೆಲ್ಲರ ಪುಣ್ಯ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ ಹೇಳಿದರು.
ತಾಲೂಕಿನ ಇನಾಂ ಹುಲ್ಲಿಕೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಕೆರೆಯ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಕೃಷ್ಣ ಟಿ. ಮಾತನಾಡಿ, ಹುಲ್ಲಿಕೇರಿ ಕೆರೆ ಮಾಡಲು ಪೂಜ್ಯರು 9.37 ಲಕ್ಷ ರೂಗಳನ್ನು ಹೂಳು ತೆಗೆಯಲು ಮಂಜೂರಿ ಮಾಡಿದ್ದಾರೆ. ಗ್ರಾಪಂ ವತಿಯಿಂದ ಕೆರೆ ಸುತ್ತ ಬೇಲಿ ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಗಣ್ಯರಾದ ಅನಂತಕುಮಾರ್ ದೇಶಪಾಂಡೆ, ತಾಲೂಕಿನ ಯೋಜನಾಧಿಕಾರಿ ಮಹಾಂತೇಶ ಎಸ್., ಅಭಿಯಂತರ ಮಂಜುನಾಥ್, ಕೆರೆ ಸಮಿತಿ ಪದಾಧಿಕಾರಿಗಳಾದ ರವಿ ಲಮಾಣಿ, ಹಣಮಂತ ಕಿತ್ತಲಿ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಲಮಾಣಿ, ನಿಂಗಯ್ಯ ಹಿರೇಮಠ, ಮಲ್ಲಪ್ಪ ಬೋವಣ್ಣವರ, ಕೀರಪ್ಪ ಕರಗುಳಿ, ವಲಯ ಮೇಲ್ವಿಚಾರಕ ಮಲ್ಲಪ್ಪ ಎಸ್. ಕೆ., ಕೃಷಿ ಅಧಿಕಾರಿ ನಾಗೇಶ ಎಸ್.ಕೆ., ಸೇವಾ ಪ್ರತಿನಿಧಿಗಳಾದ ಶೋಭಾ ಬಸರಕೋಡ, ರಾಜೇಶ್ವರಿ ಮದರಖಂಡಿ ಇತರರಿದ್ದರು.