ಸ್ವಸ್ಥ ಸಮಾಜದಿಂದ ದೇಶದ ಅಭಿವೃದ್ಧಿ

Untitled-2
ನೆಲಮಂಗಲದ ಹರ್ಷ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಹರ್ಷ ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉಪ ಕುಲಪತಿ ಡಾ.ಬಿ.ಸಿ.ಭಗವಾನ್​ ಉದ್ಘಾಟಿಸಿದರು. ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್​.ಶಿವಕುಮಾರ್​ ಇತರರು ಇದ್ದರು.
Published on

ನೆಲಮಂಗಲ : ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಮಿದುಳಿನಂತೆ ಕೆಲಸ ಮಾಡಿದರೆ, ನರ್ಸ್​ ಹಾಗೂ ಇತರು ಸಿಬ್ಬಂದಿ ಹೃದಯದಂತೆ ಕೆಲಸ ಮಾಡುತ್ತಾರೆ ಎಂದು ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉಪ ಕುಲಪತಿ ಡಾ.ಬಿ.ಸಿ.ಭಗವಾನ್​ ಅಭಿಪ್ರಾಯಪಟ್ಟರು.

ನಗರದ ಹರ್ಷ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಹರ್ಷ ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಆಯಾ ದೇಶದ ಆರೋಗ್ಯಚ ಕ್ಷೇತ್ರವನ್ನು ಅವಲಂಬಿಸಿರುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಪ್ರಾಮಾಣಿಕತೆ, ಸಮಗ್ರತೆ ಮತ್ತು ನೈತಿಕತೆ ಕಾಪಾಡಿಕೊಳ್ಳಬೇಕಿದೆ. ವೈದ್ಯಕಿಯ ವೃತ್ತಿಯಲ್ಲಿ ಸೇವಾ ಮನೋಭಾವ ಮೈಗೂಡಿಸಿ ಕೊಳ್ಳಬೇಕು. ತಂತ್ರಜ್ಞಾನಕ್ಕೆ ತಕ್ಕಂತೆ ಒಗ್ಗಿಕೊಳ್ಳಬೇಕು ಎಂದರು.

ಪ್ರಪಂಚದ ಮುಂದುವರಿದ ರಾಷ್ಟ್ರಗಳಲ್ಲಿ ಬಹುತೇಕ ವೈದ್ಯರು ಭಾರತೀಯರೇ ಆಗಿರುವುದು ಹೆಮ್ಮೆಯ ಸಂಗತಿ. ಪ್ರಸಕ್ತ ದಿನಗಳಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪಡೆದ ಪದವಿ ಪ್ರಮಾಣಪತ್ರ ವಿಶ್ವದೆಲ್ಲೆಡೆ ಮಾನ್ಯತೆ ಇದೆ ಎಂದರು. ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್​.ಶಿವಕುಮಾರ್​, ಉಪಾಧ್ಯೆ ಗಿರಿಜಾ ಶಿವಕುಮಾರ್​, ಕಾರ್ಯದರ್ಶಿ ಹರ್ಷ ಶಿವಕುಮಾರ್​, ಸಹ ಕಾರ್ಯದರ್ಶಿ ಯಶಸ್ಸು ಶಿವಕುಮಾರ್​, ಪ್ರಾಂಶುಪಾಲೆ ಡಾ.ಮಮತರೆಡ್ಡಿ ಡಾ.ಅನ್ನಪೂರ್ಣ, ಡಾ.ಜಯಪ್ರಕಾಶ್​ ಡಾ.ಧನಪಾಲ್​, ಡಾ.ಮುನಿರತ್ನ ಡಾ.ಚಿಕ್ಕೇಗೌಡ, ಡಾ.ವಿಜಯ್​ಕುಮಾರ್​, ಪ್ರೊ.ರಮ್ಯಾ ಗೌಡ ಇತರರಿ ಇದ್ದರು.

ತಂತ್ರಜ್ಞಾನದ ಮಾಹಿತಿ ಇರಲಿ : ಕಾಲಕಾಲಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ, ಸಂಶೋಧನೆಗಳ ಮಾಹಿತಿ ವಿದ್ಯಾರ್ಥಿಗಳಿಗಿರಬೇಕಿದೆ. ಎಚ್ಚೆತ್ತುಕೊಳ್ಳದಿದಲ್ಲಿ ಅದರ ಪರಿಣಾಮ ಅನುಭವಿಸ ಬೇಕಾಗುತ್ತದೆ. ಕರೊನಾ ಸಮಯದಲ್ಲಿ ದಿನನಿತ್ಯ ಕೆಲಸ ಮಾಡಿರುವವರು ಇದ್ದರೆ ಅದು ಆರೋಗ್ಯ ಕ್ಷೇತ್ರದವರು ಮಾತ್ರ ಎಂದು ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ನರ್ಸಿಂಗ್​ ವಿಭಾಗ ಮುಖ್ಯಸ್ಥ ಡಾ.ಪಿ.ಮಹೇಶ್​ ಹೇಳಿದರು.

ಸಮಯ ನಿರ್ವಹಣೆ ಮುಖ್ಯ : ದೇಶದೆಲ್ಲೆಡೆ ಮೊದಲ ಬಾರಿಗೆ ಫಾರ್ಮಸಿಸ್ಟ್​ ಗಳಿಗೆ ಆನ್​ಲೈನ್​ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿದ್ದು ರಾಜ್ಯದ ಔಷಧ ಮಂಡಳಿ. ಆರೋಗ್ಯ ಕ್ಷೇತ್ರ ಎಂದಾಕ್ಷಣ ವೈದ್ಯರು ಮಾತ್ರವಲ್ಲದೆ, ಡಯಗ್ನಾಸ್ಟಿಕ್​ ಸಿಬ್ಬಂದಿ, ನರ್ಸ್​, ಮೆಡಿಕಲ್​ ಸಿಬ್ಬಂದಿ ಒಳಗೊಳ್ಳುತ್ತದೆ. ಅರೋಗ್ಯ ಕ್ಷೇತ್ರ ವಿಶ್ವಾದ್ಯಂತ ವಿಶಾಲವಾಗಿ ಬೆಳೆದಿದೆ. ವಿದ್ಯಾರ್ಥಿಗಳು ಸಮಯ ನಿರ್ವಹಣೆಯ ಮಹತ್ವ ಅರಿತರೆ ಸಾಧನೆ ಮಾಡಬಹುದು ಎಂದು ಡಾ.ಸಿರ್ಸೆ ಕ್ರಾಂತಿಕುಮಾರ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net