ಗ್ರಾಮಗಳ ಪ್ರಗತಿಯಿಂದ ಮಾತ್ರ ದೇಶದ ಅಭಿವೃದ್ಧಿ

25-02-Shiva-3
ರಾಯಚೂರು ತಾಲೂಕಿನ ನೆಲಹಾಳ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಧ್ಯಾಪಕ ಡಾ.ಸಂತೋಷಕುಮಾರ ರೇವೂರ್ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಕಾರಿ ಡಾ.ವಿಶ್ವನಾಥ, ಪ್ರಾಧ್ಯಾಪಕಿ ಡಾ.ಸುಮಾ ಇದ್ದರು.
Published on

ರಾಯಚೂರು: ಭಾರತ ಹಳ್ಳಿಗಳ ದೇಶವಾಗಿದ್ದು, ಗ್ರಾಮಗಳು ಸರ್ವಾಂಗೀಣ ಪ್ರಗತಿ ಕಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಗ್ರಾಮಗಳನ್ನು ವಿಕಾಸದ ಪಥದತ್ತ ಕೊಂಡೊಯ್ಯುವ ಕೆಲಸವನ್ನು ಯುವಜನಾಂಗ ಮಾಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಧ್ಯಾಪಕ ಡಾ.ಸಂತೋಷಕುಮಾರ ರೇವೂರ್ ಹೇಳಿದರು.
ತಾಲೂಕಿನ ನೆಲಹಾಳ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾನುವಾರ ಮಾತನಾಡಿ, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.65ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದು, ಅವರ ಬದುಕು ಸುಧಾರಿಸುವ ಕೆಲಸವಾಗಬೇಕಾಗಿದೆ ಎಂದರು.
ಗ್ರಾಮಗಳು ಸಾಮಾಜಿಕ, ಆರ್ಥಿಕ ಮತ್ತು ಸುಸ್ಥಿರ ಅಭಿವೃದ್ಧಿ ಸಾಸಿದಲ್ಲಿ ಅಲ್ಲಿನ ಜನರ ವೈಯಕ್ತಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಯುವಜನತೆ ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ವಿದ್ಯಾಭ್ಯಾಸದ ಜತೆಗೆ ವಿದ್ಯಾರ್ಥಿಗಳು ಸಾಮಾಜಿಕ ಸೇವೆಯಲ್ಲಿಯೂ ತೊಡಗಿಕೊಳ್ಳಬೇಕು.
ಯುವ ಸಮುದಾಯದ ಕಾರ್ಯಶಕ್ತಿಯನ್ನು ಉತ್ತೇಜನಗೊಳಿಸಿ ಸಮಾಜಮುಖಿ ಜೀವನದ ಕಡೆಗೆ ಕೊಂಡೊಯ್ಯವುದೇ ಎನ್‌ಎಸ್‌ಎಸ್‌ನ ಧ್ಯೇಯೋದ್ಧೇಶವಾಗಿದೆ ಎಂದು ಎಂದು ಡಾ.ಸಂತೋಷಕುಮಾರ ರೇವೂರ್ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಎನ್‌ಎಸ್‌ಎಸ್ ಕಾರ್ಯಕ್ರಮಾಕಾರಿ ಡಾ.ವಿಶ್ವನಾಥ, ಪ್ರಾಧ್ಯಾಪಕಿ ಡಾ.ಸುಮಾ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net