ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ

Development of the country only by Modi
ಬಾಗಲಕೋಟೆ ನಗರದಲ್ಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮತಯಾಚನೆ ಮಾಡಿದರು.
Published on

ಬಾಗಲಕೋಟೆ : ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಸರ್ಕಾರಕ್ಕೂ ತುಂಬಾನೆ ವ್ಯತ್ಯಾಸವಿದೆ. 75 ವರ್ಷ ಮಾಡದ ಅಭಿವೃದ್ಧಿ ಕಾರ್ಯ ಮೋದಿ ಅವರು 10 ವರ್ಷದಲ್ಲಿ ಮಾಡಿದ್ದಾರೆ. ದೇಶದ ಅಭಿವೃದ್ಧಿ ಮೋದಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಿಸಿ ಅವರು ಮತಯಾಚನೆ ಮಾಡಿ ಮಾತನಾಡಿದರು.

ಭಾರತ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದಲ್ಲೆ ಗುರುತಿಸಿಕೊಂಡಿದೆ, ಸ್ವಾತಂತ್ರ್ಯ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು, ಬಿಜಿಪಿ ಸರ್ಕಾರ ಬಂದಮೇಲೆ, ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ಪ್ರಧಾನಿ ಮೋದಿ ಬಂದ ಬಳಿಕ ವಿಶ್ವವೇ ಭಾರತವನ್ನು ಗುರುತಿಸುತ್ತಿದೆ, ಭಾರತದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಮತ ನೀಡಿ ಎಂದರು.

ಮನೆ ಮನೆಗೆ ತೆರಳಿ ಮೋದಿ ಸರ್ಕಾರ ಅಭಿವೃದ್ಧಿ ಪರ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ ಮತ ಯಾಚನೆ ಮಾಡಿದರು.
ನಗರದ ಕಿಲ್ಲಾ ಗಲ್ಲಿಯ ಅಂಬಾಭವಾನಿ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ವಾರ್ಡ್ ನಂಬರ್ 11 ಮತ್ತು 13 ನೇ ವಾರ್ಡಗಳಲ್ಲಿ ಸಂಚರಿಸಿ, ಪಾದಯಾತ್ರೆ ಮೂಲಕ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.

ನಗರಸಭೆ ಸದಸ್ಯರಾದ ಶ್ರೀನಾಥ ಸಜ್ಜನ, ರಮೇಶ ಕೋಟಿ, ಸಂಗಪ್ಪ ಹಾದಿಮನಿ, ಕಾಂತು ಪತ್ತಾರ, ತಾನಾಜಿ ಜಮಖಂಡಿ, ಮಹಾವೀರ ಹೊನ್ಯಾಳ, ಮಲ್ಲು ಶಹಾಪುರ, ನಿಲಪ್ಪ ಕಲ್ಮಠ, ಗುಂಡುರಾವ ಶಿಂಧೆ, ಅಶೋಕ ಪವಾರ, ರಾಜು ಮೊರೆ, ರಂಗನಾಥ ಜವಳಿ, ರವಿ ಹನಮಶೆಟ್ಟಿ, ಯಲ್ಲಪ್ಪ ಅಂಬಿಗೇರ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net