ಗ್ರಾಮಗಳ ಜನಜೀವನ ಸುಧಾರಿಸಿದರೆ ದೇಶ ಅಭಿವೃದ್ಧಿ

Development of the country
ತೇರದಾಳದಲ್ಲಿ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ನೂತನ ಕಟ್ಟಡವನ್ನು ಜ್ಯೋತಿ ಬೆಳಗಿಸುವ ಮೂಲಕ ಶ್ರೀಗಳು ಉದ್ಘಾಟಿಸಿದರು. ಡಾ.ಮಹಾಂತಪ್ರಭು ಮಹಾಸ್ವಾಮಿಗಳು, ಶಿವಶಂಕರ ಶ್ರೀಗಳು, ಬಸವಣ್ಣಿ ಮುಗಳಖೋಡ ಇದ್ದರು.
Published on

ತೇರದಾಳ: ಕೇವಲ ದೊಡ್ಡ ದೊಡ್ಡ ನಗರಗಳು ಅಭಿವೃದ್ಧಿ ಹೊಂದಿದರೆ ನಮ್ಮ ದೇಶ ಅಭಿವೃದ್ಧಿ ಹೊಂದಿತು ಎನ್ನುವಂತಿಲ್ಲ. ಈ ನಾಡಿನಲ್ಲಿರುವ ಪ್ರತಿಹಳ್ಳಿಯ ಜನರ ಜೀವನಮಟ್ಟ ಸುಧಾರಣೆಯಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಬಿಡಿಸಿಸಿ ಬ್ಯಾಂಕ್ ಹತ್ತಿರ ನಿರ್ಮಿಸಿರುವ ಮೂಡಲಗಿ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಪಟ್ಟಣದ ಶಾಖೆ ಕಟ್ಟಡದ ಉದ್ಘಾಟಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತವನ್ನು ನೋಡುವ ದೃಷ್ಟಿಕೋನವೀಗ ಬದಲಾಗಿದೆ. ಕಳೆದ ಐವತ್ತು ದಶಕದ ಹಿಂದೆ ನಮ್ಮ ದೇಶದ ಬಗ್ಗೆ ಇತರ ದೇಶಗಳಲ್ಲಿ ಕೀಳರಿಮೆ ಭಾವನೆ ಇತ್ತು. ಆದರೆ ಇಂದು ನಮ್ಮ ಭಾರತ ವಿಶ್ವದ ಮುಂಚೂಣಿ ದೇಶಗಳಲ್ಲಿ ಗುರುತಿಸಿಕೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವಣ್ಣಿ ಮುಗಳಖೋಡ ಮಾತನಾಡಿ, 1995 ರಲ್ಲಿ ಸಂಸ್ಥೆ ಆರಂಭವಾಗಿದೆ. ಎಲ್ಲ ಸಮಾಜದ ಗ್ರಾಹಕರ ಸಹಕಾರದೊಂದಿಗೆ ಸೊಸೈಟಿ ಅಭಿವೃದ್ಧಿ ಪಥದತ್ತ ಸಾಗಿದೆ ಎಂದರು.

ಶಿವಶಂಕರ ಶ್ರೀಗಳು ಮಾತನಾಡಿ, ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಗಮನ ಸೆಳೆದ ಈ ಬ್ಯಾಂಕ್ ಶತಮಾನೊತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು. ವಿದ್ಯಾಧರ ಸವದಿ ಮಾತನಾಡಿದರು. ವೇದಿಕೆಯಲ್ಲಿ ಸರವರಖಾನ್ ಇನಾಮದಾರ, ಗೌತಮ್ ರೋಡಕರ, ರಾಜಾಸಾಬ ನಗಾರ್ಜಿ ಇದ್ದರು. ಶಿವಾನಂದ ಮುರಗೋಡ ಸ್ವಾಗತಿಸಿದರು. ಮ.ಕ.ಮೇಗಾಡಿ ನಿರೂಪಿಸಿದರು. ರಮೇಶ ವಂಟಗೂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net