ಪಕ್ಷ ಬೇಧ ಮರೆತು ಕ್ಷೇತ್ರದ ಅಭಿವೃದ್ಧಿ: ಸಚಿವೆ ಹೆಬ್ಬಾಳ್ಕರ್​

4Anand3
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲಕ್ಷಿ$್ಮ ಹೆಬ್ಬಾಳ್ಕರ್​ ಚಾಲನೆ ನೀಡಿದರು. ಯುವರಾಜ ಕದಂ, ಮನೋಹರ್​ ಬೆಳಗಾಂವ್ಕರ್​, ನಾರಾಯಣ ಪಾಟೀಲ, ಸಾಗರ ತೋರಾಳಕರ್​, ಗಿತೇಶ್​ ತಾನಾಬ್​ ಇತರರಿದ್ದರು.
Published on

ಬೆಳಗಾವಿ: ಕೆಲವರು ಧರ್ಮ, ಧರ್ಮ ಎಂದು ಅಬ್ಬರಿಸುತ್ತಾರೆ. ಅವರದ್ದು ಕೇವಲ ಭಾಷಣದಲ್ಲಿ ಮಾತ್ರ ಧರ್ಮವಿರುತ್ತದೆ. ನನ್ನದು ನಿಜವಾದ ಆಚರಣೆಯಲ್ಲಿ ಧರ್ಮವಿದೆ. ಧರ್ಮದಿಂದ ಕೆಲಸ ಮಾಡುತ್ತಿದ್ದೇನೆ, ಧರ್ಮದ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹೇಳಿದರು.

ತಾಲೂಕಿನ ಇನಾಮಬಡಸ್​ ಗ್ರಾಮದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಅವರು ಮಾತನಾಡಿ, ಒಬ್ಬ ಮಹಿಳೆಯ ಮೇಲೆ ವಿಶ್ವಾಸವಿಟ್ಟು ಶಾಸಕಿಯಾಗಿ ಆಯ್ಕೆ ಮಾಡಿ ಕಳಿಸಿದ್ದೀರಿ, ನಿಮ್ಮ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ೇತ್ರದ ಹೆಸರನ್ನು ರಾಜ್ಯಾದ್ಯಂತ ಬೆಳಗುವಂತೆ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಪ ಭೇದ ಮರೆತು ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಒಂದೇ ಒಂದು ರೂಪಾಯಿ ಮಧ್ಯವರ್ತಿಗಳ ಪಾಲಿಲ್ಲದೆ, ಯಾವುದೇ ಗೊಂದಲವಿಲ್ಲದೆ ವರ್ಷಕ್ಕೆ 34 ಸಾವಿರ ಕೋಟಿ ರೂ ಮೊತ್ತದ ಗೃಹಲಕ್ಷಿ$್ಮ ಯೋಜನೆ ಜಾರಿಗೊಳಿಸಲಾಗುತ್ತಿದೆ. ನಿಮ್ಮ ಮನೆ ಬಾಗಿಲಿಗೆ ಹಣ ಬರುತ್ತಿದೆ. ಇಂತಹ ದೊಡ್ಡ ಯೋಜನೆ ಜಾರಿಗೊಳಿಸುವ ಭಾಗ್ಯ ನನಗೆ ಸಿಕ್ಕಿದೆ ಎಂದರು.

ಯುವರಾಜ ಕದಂ, ಮನೋಹರ ಬೆಳಗಾಂವ್ಕರ್​, ನಾರಾಯಣ ಪಾಟೀಲ, ಸಾಗರ ತೋರಾಳಕರ, ಗಿತೇಶ ತಾನಾಬ್​, ಶಿವಾಜಿ ಪಾಟೀಲ, ಶಿವಾಜಿ ತಾನಾಬ್​, ಜಯಪ್ಪ ಪಾಟೀಲ, ಕೃಷ್ಣ ಗಡಕರಿ, ಕೃಷ್ಣ ಕಾಂಬಳೆ, ರಾಮು ಪಾಟೀಲ, ಕೃಷ್ಣ ಪಾಟೀಲ, ಭರಮಣ್ಣ ಕಾಂಬಳೆ, ಮಾರುತಿ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net