

ಅಳ್ನಾವರ: ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಜರುಗಿದ 12 ವರ್ಷಗಳ ನಂತರ ನಡೆದ ಗ್ರಾಮದೇವತೆಯರುಗಳಾದ ಶ್ರೀಲಕ್ಷ್ಮೀದೇವಿ, ಶ್ರೀದುರ್ಗಾದೇವಿಯರ 11 ದಿನಗಳ ಜಾತ್ರೆಯ ಲೆಕ್ಕ ಪತ್ರದ ವರದಿಯ ವಿವರವನ್ನು ಧರ್ಮದರ್ಶಿ ಬಿ.ಎ. ಪಾಟೀಲರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರಿಗೆ ತಿಳಿಸಲಾಯಿತು.
ಎಲ್ಲ ಜಾತಿ, ಮತ ಹಾಗೂ ಪಂಥಗಳ ಭಾಂಧವರು ಜತೆಗೂಡಿ ಅತಿ ವೈಭವದಿಂದ ನಡೆಸಲಾಗಿರುವ ಜಾತ್ರಾ ಮಹೋತ್ಸವದಂತೆ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಬೇಕು. ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ದೇವಸ್ಥಾನಗಳ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹಿರಿಯರಾದ ಅರ್ಜುನ ಅಷ್ಟೇಕರ. ಜೆ.ಓ. ಕೇಸರೆಕರ, ಎಂ.ಎಂ. ಗುಂದಕಲ, ಸಿದ್ದಪ್ಪ ಕಿರ್ಲೋಸ್ಕರ, ಎಸ್.ಜಿ. ಜಕಾತಿ, ಮಹಾದೇವ ಸಾಗರೇಕರ, ಮಧು ಬಡಸ್ಕರ, ಅಮೂಲ ಗುಂಜಿಕರ, ಸಿ.ಕೆ. ಪಟೇಲ, ವಿಜಯ ಕೌಜಲಗಿ, ರಾಜು ಬೆಂಡಿಗೇರಿ, ಉದಯ ಗಡಕರ, ರಾಜು ಮುನವಳ್ಳಿ, ಯಲ್ಲಪ್ಪ ತೇರಗಾವಕರ, ಯಲ್ಲಾರಿ ಹುಬ್ಳಿಕರ, ರೂಪೇಶ ಗುಂದಕಲ, ರಾಜು ಕರ್ಲೆಕರ ಇತರರು ಇದ್ದರು.