ಮಂದಿರಗಳ ಅಭಿವೃದ್ಧಿಗೆ ಹಣಕಾಸು ನೆರವು

ctd 11 sajjanakere-02
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಸಜ್ಜನಕೆರೆ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ.ಡಿ.ಡಿ.ಯನ್ನು ಬುಧವಾರ ವಿತರಿಸಲಾಯಿತು.

ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೀರೇಶ್ ಅವರಿಗೆ ಡಿ.ಡಿ.ಹಸ್ತಾಂತರಿಸಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆ ತಾ ಲೂಕು ಯೋಜನಾಧಿಕಾರಿ ಬಿ.ಅಶೋಕ್,ಮಠ-ಮಂದಿರಗಳ ಸುತ್ತಮುತ್ತ ವಾತಾವರಣ ಸ್ವಚ್ಛವಾಗಿರಬೇಕೆಂಬುದು ಧರ್ಮಸ್ಥಳದ ಧ ರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಡೆ ಅವರ ಕನಸು.

ಅನೇಕ ದೇವಾಲಯಗಳ ಜೀರ್ಣೋದ್ದಾರಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಗೌರವಧನದ ಮೂಲಕ ಶಿಕ್ಷಕರನ್ನು ನೇಮಿಸುವುದಾಗಿ ಹೇಳಿದರು. ಶೋಭಾ,ವೆಂಕಟೇಶ್, ರಮೇಶ್,ಸಿದ್ದೇಶ್,ಹನುಮಂತಪ್ಪ,ಗೋವಿಂದಪ್ಪ,ದೇವಾಲಯ ಜೀರ್ಣೋದ್ಧಾರ ಸಮಿತಿ ಸದಸ್ಯರು,ಗ್ರಾಮ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net