ಧಗ್ರಾ ಯೋಜನೆಯಿಂದ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ

dhagra
Published on

ನರಗುಂದ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಬೂದಿಹಾಳ ಗ್ರಾಮದ ಶ್ರೀದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಮಂಗಳವಾರ 1 ಲಕ್ಷ ರೂ.ಮೊತ್ತದ ಡಿಡಿ ವಿತರಿಸಲಾಯಿತು.

ತಾಲೂಕು ಯೋಜನಾಧಿಕಾರಿ ಜಗದೀಶ ಭಂಡಾರಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳು ಪ್ರಸಾದದ ರೂಪದಲ್ಲಿ ರಾಜ್ಯದ ಪ್ರತಿಯೊಂದು ಮಠ, ಮಂದಿರ, ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೋಟ್ಯಂತರ ರೂ. ಅನುದಾನ ನೀಡಿದ್ದಾರೆ. ಪರಿಸರ ಸಮತೋಲನ ಕಾಪಾಡಿಕೊಳ್ಳಲು ಕೆರೆ, ನದಿ, ಬಾವಿಗಳ ಹೂಳೆತ್ತುವುದು. ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಧರ್ಮಾಧಿಕಾರಿಗಳು ಕೈಗೊಂಡಿದ್ದಾರೆ ಎಂದರು.

ಶ್ರೀದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ ಹಳೇಹೊಳಿ, ಖಜಾಂಚಿ ಶಿವನಗೌಡ ಮನಿಕಟ್ಟಿ ಮಾತನಾಡಿ, ಧರ್ಮಸ್ಥಳ ಸಂಘದ ಪ್ರಗತಿನಿಧಿ ಸಾಲ ಪಡೆದ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಿವೆ ಎಂದರು.

ಕೊಣ್ಣೂರ ವಲಯದ ಮೇಲ್ವಿಚಾರಕ ಗುರುರಾಜ ಬೆಳಗಲಿ, ಸಿದ್ದಪ್ಪ ನರಗುಂದ, ಬಸವರಾಜ ಮಾನೆ, ಕೊಣ್ಣೂರ ಗ್ರಾಪಂ ಸದಸ್ಯ ಕೃಷ್ಣಪ್ಪ ಚವ್ಹಾಣ, ಲಕ್ಷ್ಮವ್ವ ಪೂಜಾರ, ಹನುಮಂತಗೌಡ ಪಾಟೀಲ, ಗೋವಿಂದಗೌಡ ಪಾಟೀಲ, ಮಲ್ಲಪ್ಪ ಹನುಮಸಾಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net