ಭಜನೆ ಮೂಲಕ ಧಾರ್ಮಿಕತೆ ಬೆಳವಣಿಗೆ

Kin_Bhajane
Published on

ಕಿನ್ನಿಗೋಳಿ: ಭಜನೆ ನಮ್ಮ ಸಂಸ್ಕೃತಿ, ಭಜನೆ ಮೂಲಕವಾಗಿ ನಾವು ಧಾರ್ಮಿಕತೆಯನ್ನು ಬೆಳೆಸಬಹುದು ಎಂದು ಕಿನ್ನಿಗೋಳಿ ಜಿಎಸ್‌ಬಿ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು.

ಕಿನ್ನಿಗೋಳಿ ಶ್ರೀರಾಮ ಮಂದಿರದ ಆಶ್ರಯದಲ್ಲಿ 24 ದಿನಗಳ ನಗರ ಸಂಕೀರ್ತನಾ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂದಿರದ ಪ್ರಧಾನ ಅರ್ಚಕ ಗೀರೀಶ್ ಭಟ್ ಮಾತನಾಡಿದರು. ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷ ಆದಿತ್ಯ ಕಾಮತ್, ಕೋಶಾಧಿಕಾರಿ ಮಂಜುನಾಥ ಮಲ್ಯ, ಆಡಳಿತ ಮಂಡಳಿ ಸದಸ್ಯರಾದ ರಾಘವೇಂದ್ರ ಪ್ರಭು, ನಾಮದೇವ ಕಾಮತ್, ಗಣೇಶ್ ಪ್ರಸಾದ್ ಕಾಮತ್, ಗುರುದತ್ತ ರಾವ್, ರಾಜೇಶ್ ಕಾಮತ್, ನರಸಿಂಹ ಪೈ, ರಘುವೀರ ಕಾಮತ್, ರವಿದಾಸ ಶೆಣೈ, ಭಾಸ್ಕರ ಶೆಣೈ, ವಿನಾಯಕ ಮಲ್ಯ, ಮಾತೃ ಮಂಡಳಿಯ ಭಾರತೀ ಶೆಣೈ, ವಿಜಯಾ ಪ್ರಭು, ರಾಧಾ ಶೆಣೈ, ವಾರಿಜಾ ಕಾಮತ್, ಸಂಧ್ಯಾ ಮಲ್ಯ, ಸೀಮಾ ಭಟ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net