ಭಕ್ತರ ಸಹಕಾರದಿಂದ ಮಠಗಳ ಅಭಿವೃದ್ಧಿ

13Raibag2
ಭೆಂಡವಾಡ ಗ್ರಾಮದ (ಗುಡ್ಡದ) ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗುರುಸಿದ್ಧ ಸ್ವಾಮೀಜಿ, ವಿರುಪಾಕ್ಷ ಸ್ವಾಮೀಜಿ, ಮಾರುತಿ ಶರಣರು ಇತರರಿದ್ದರು.
Published on

ರಾಯಬಾಗ: ಭಕ್ತರ ಸಹಕಾರದಿಂದ ಮಠಗಳು ಬೆಳೆಯಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಭೆಂಡವಾಡ ಗ್ರಾಮದ (ಗುಡ್ಡದ) ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಮನೆ-ಮನಗಳಲ್ಲಿ ಭಕ್ತಿ ಹೊಂದಬೇಕು ಎಂದರು.

ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಮಹಾರಾಜರು ಮಾತನಾಡಿ, ರೇವಣಸಿದ್ಧೇಶ್ವರ ನಡೆದಾಡಿದ ಭೂಮಿ ಪುಣ್ಯ ಭೂಮಿಯಾಗಿ ಅಭಿವೃದ್ಧಿ ಹೊಂದಿದೆ. ಮನುಷ್ಯನ ದೇಹ ಮತ್ತು ಆತ್ಮಕ್ಕೆ ಕೊಂಡಿಯಾಗಿರುವ ಮನಸ್ಸು ಗೆಲ್ಲಲು ಶಿವಧ್ಯಾನ ಮಾಡಬೇಕೆಂದು ಹೇಳಿದರು.

ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ, ಘಟಪ್ರಭಾ ಹೊಸಮಠದ ವಿರೂಪಾಕ್ಷ ಸ್ವಾಮೀಜಿ, ಮಾರುತಿ ಶರಣರು, ಹಿರಿಯ ಧುರೀಣ ಅನಿಲ ದಳವಾಯಿ, ವಕೀಲ ವಿ.ಎಸ್.ಪೂಜೇರಿ, ರೇವಣು ಶಿವಾಪೂರೆ, ಸುರೇಶ ಚೌಗುಲೆ, ಮಹಾದೇವ ಲಕ್ಷ್ಮೇಶ್ವರ, ರೇವಣು ದುಪದಾಳೆ, ಸಿದ್ದು ಪಾತ್ರೋಟ, ಸಂಜು ಹಂಜಿ, ಸಂಗಪ್ಪ ಬೆನ್ನಾಳೆ, ಸಿದ್ದಗೌಡ ಕಬಾಡಗಿ ಇದ್ದರು. ರವಿ ಪೂಜೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net