ಕೆರೆ ಕಟ್ಟೆಗಳು ಗ್ರಾಮೀಣ ಭಾಗದ ಜೀವನಾಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ಅಭಿಮತ

Development of Lake by Dharmasthala Village Development Project mandya
Published on

ಮಂಡ್ಯ: ಅನಾದಿಕಾಲದಿಂದಲೂ ಕೆರೆ ಕಟ್ಟೆಗಳು ಗ್ರಾಮೀಣ ಭಾಗದ ಜೀವನಾಡಿಗಳಾಗಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ಹೇಳಿದರು.

ತಾಲೂಕಿನ ಸಂಪಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಹಳ್ಳಿ ಯೋಜನಾ ಕಚೇರಿ ವ್ಯಾಪ್ತಿಯ ಸಂಪಹಳ್ಳಿ ಗ್ರಾಮದಲ್ಲಿ ‘ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ’ದಡಿ ಕೆರೆ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ವ್ಯಾಪ್ತಿಯ ಜನರ ಮತ್ತು ರೈತರ ಜೀವನಾಡಿಯಾಗಿರುವ ಕೆರೆ ಕಟ್ಟೆಗಳ ಪುನಶ್ಚೇತನ ಮಾಡುವುದರಿಂದ ಹೆಚ್ಚಿನ ನೀರಿನ ಸಂಗ್ರಹಣೆ ಆಗುತ್ತದೆ. ಇದರಿಂದ ಸ್ಥಳೀಯ ಜಾನುವಾರು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಗೆ ಅನುಕೂಲವಾಗುವುದು ಎಂದರು.

ಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯ. ಈ ನಿಟ್ಟಿನಲ್ಲಿ ಕೆರೆಯ ಸ್ವಚ್ಛತೆಯನ್ನೂ ಕಾಪಾಡುವಂತೆ ಸಮಿತಿಯವರಿಗೆ ಮಾರ್ಗದರ್ಶನವನ್ನು ನೀಡಲಾಗಿದೆ. ಅಂತೆಯೇ ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಈಗಾಗಲೇ 99 ಕೆರೆಗಳನ್ನು ಪುನಶ್ಚೇತನ ಗೊಳಿಸಲಾಗಿದೆ. ಸಂಪಹಳ್ಳಿ ಗ್ರಾಮದ ಕೆರೆಯ ಸುಮಾರು 2 ಎಕರೆ ವ್ಯಾಪ್ತಿ ಹೊಂದಿದ್ದು, ಇದರ ಪುನಶ್ಚೇತನದಿಂದ 400 ಕುಟುಂಬದ 200 ಎಕರೆ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತದೆ. ಸ್ಥಳೀಯ ಗ್ರಾಮಸ್ಥರು ನೆರವಿಗೆ ಧಾವಿಸಿ ಸಹಕಾರ ನೀಡಿ ಎಂದು ಸಲಹೆ ನೀಡಿದರು.

ಎಚ್.ಮಲ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ, ಪ್ರಾದೇಶಿಕ ವ್ಯಾಪ್ತಿಯ ಕೆರೆ ವಿಭಾಗದ ಇಂಜಿನಿಯರ್ ಸುರೇಶ್, ಹೊಸಹಳ್ಳಿ ವ್ಯಾಪ್ತಿಯ ಯೋಜನಾಧಿಕಾರಿ ರವಿ, ಗ್ರಾಪಂ ಸದಸ್ಯ ಸಂತೋಷ, ಮುಖಂಡರಾದ ಬಸವರಾಜ್, ಶಿವಶಂಕರ, ಕೃಷಿ ಮೇಲ್ವಿಚಾರಕ ಲೋಕೇಶ್, ವಲಯದ ಮೇಲ್ವಿಚಾರಕಿ ಸುಮಂಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net