ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಭಿವೃದ್ಧಿ

DHARMASTHALA
ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿ ಸೋಮವಾರ ಕುಡಿಯುವ ನೀರಿನ ಕೆರೆ ದಡದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಯೋಗೀಶ ಅವರು ಸಸಿ ನೆಟ್ಟರು. ವಿಶಾಲಾ ಮಲ್ಲಾಪುರ, ಬೀರಪ್ಪ ಪೂಜಾರ, ಗವಿಸಿದ್ದಯ್ಯ ಹಳ್ಳಿಕೇರಿಮಠ ಇತರರಿದ್ದರು.
Published on

ಮುಂಡರಗಿ: ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಂತ್ಲಿಶಿರೂರ ಗ್ರಾ.ಪಂ.ಕೆರೆ ಅಭಿವೃದ್ದಿ ಸಮಿತಿ ಸಹಯೋಗದೊಂದಿಗೆ ಸೋಮವಾರ ಕುಡಿಯುವ ನೀರಿನ ಕೆರೆ ದಡದಲ್ಲಿ ಸಸಿ ನೆಡುವುದು ಹಾಗೂ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಕಾರ್ಯಕ್ರಮ ಜರುಗಿತು.

ನಾಮಫಲಕ ಅನಾವರಣಗೊಳಿಸಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಯೋಗೀಶ ಅವರು, ತಾಲೂಕಿನ ಜಂತ್ಲಿಶಿರೂರ ಗ್ರಾಮದ ಕುಡಿಯುವ ನೀರಿನ ಕೆರೆಯು ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡು ಬತ್ತಿ ಹೋಗಿತ್ತು. ಧಗ್ರಾ ಯೋಜನೆಯಿಂದ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಪರಿಸರ ರಕ್ಷಣೆಗಾಗಿ ಕೆರೆ ಅಂಗಳದಲ್ಲಿ ಸಸಿ ನೆಡುವ ಕಾರ್ಯ ಮಾಡಲಾಗುತ್ತಿದೆ’ ಎಂದರು.

ತಾಲೂಕು ಯೋಜನಾಧಿಕಾರಿ ವಿಶಾಲಾ ಮಲ್ಲಾಪುರ, ಕೆರೆಸಮಿತಿ ಅಧ್ಯಕ್ಷ ಬೀರಪ್ಪ ಪೂಜಾರ ಮತ್ತು ಉಪಾಧ್ಯಕ್ಷೆ ರೇಣವ್ವ ಪೂಜಾರ, ಜನ ಜಾಗೃತಿ ಸಮಿತಿ ಸದಸ್ಯ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿದರು. ಕೆರೆಯ ಸುತ್ತಲೂ ವಿವಿಧ ಜಾತಿಯ ಸುಮಾರು 78 ಹಣ್ಣುಗಳ ಸಸಿಗಳನ್ನು ನೆಡಲಾಯಿತು.

ಗ್ರಾ.ಪಂ. ಉಪಾಧ್ಯಕ್ಷ ರವಿ ದೊಡ್ಡಮನಿ, ಸದಸ್ಯರಾದ ಯಲ್ಲಪ್ಪ ಹೊಂಬಳ, ಸಂಗನಗೌಡ ಪಾಟೀಲ, ಲೀಲವ್ವ ಪೂಜಾರ, ಕೆರೆ ಸಮಿತಿ ಸದಸ್ಯರಾದ ಈರಪ್ಪ ಗೋಸಲದ, ಶೇಖಪ್ಪ ದೇಸಾಯಿ, ವಿಜಯಕುಮಾರ ಕೊಲ್ಲಿಕಾರ, ರಾಜಕುಮಾರ ಪೂಜಾರ, ಸತೀಶ ಎಸ್.ಎನ್, ರೇವಪ್ಪ ಲಕ್ಕುಂಡಿ, ದಾದ ಕಲಂದರ, ಈರಣ್ಣ ಕೆ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net