ಎಲ್ಲರ ಸಹಕಾರದಿಂದ ಕೊಡವ ಸಮಾಜದ ಅಭಿವೃದ್ಧಿ ಸಾಧ್ಯ: ಮಂಡುವಂಡ ಮುತ್ತಪ್ಪ

kodava samaja
Published on

ಮಡಿಕೇರಿ: ಮಡಿಕೇರಿ ಕೊಡವ ಸಮಾಜವು ಕೊಡವ ಜನಾಂಗದ ಮೊತ್ತಮೊದಲ ಸಮಾಜವಾಗಿದ್ದು, ದಾನಿಗಳ ಸಹಕಾರದಿಂದ ಪುನರ್‌ನವೀಕರಣಗೊಳ್ಳುವ ಮೂಲಕ ಅಭಿವೃದ್ಧಿಯತ್ತಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯ ಬೇಕೆಂದರೆ ಎಲ್ಲರ ಸಹಕಾರಬೇಕೆಂದು ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮನವಿ ಮಾಡಿದರು.


ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಡಿಕೇರಿಯಲ್ಲಿ ಕೊಡವ ಸಂಘವಾಗಿ ಪ್ರಾರಂಭಗೊಂಡು ನಂತರದಲ್ಲಿ ಕೊಡವ ಸಮಾಜವಾಗಿ ರೂಪುಗೊಂಡಿತು. ಆಡಳಿತ ಮಂಡಳಿಯು ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಿದೆ. ಸಮಾಜದ ಅದೀನ ಸಂಸ್ಥೆಯಾದ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯು ಹಲವು ವರ್ಷಗಳಿಂದ ಶೇ೧೦೦ ಫಲಿತಾಂಶ ಪಡೆಯುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.


ಸಮಾಜದ ಅಭಿವೃದ್ಧಿಗೆ ಕೊಡವ ಅಭಿವೃದ್ಧಿ ನಿಗಮದಿಂದ ೧೦ ಲಕ್ಷ ಬಂದಿದ್ದು ಶಾಸಕರು, ಸಂಸದರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಮಾಜದ ಬೈಲಾ ತಿದ್ದುಪಡಿ ಕಾರ್ಯ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಮಡಿಕೇರಿಯ ಪೊಮ್ಮಕ್ಕಡ ಕೂಟವನ್ನು ಸಮಾಜದ ಅಂಗ ಸಂಸ್ಥೆಯಾಗಿ ಸೇರ್ಪಡೆಗೆ ತೀರ್ಮಾನಿಸಲಾಗುವುದೆಂದರು.


ಕಳೆದ ಮಾಹಾಸಭೆಯ ವರದಿ, ಆಡಳಿತ ಮಂಡಳಿ ವರದಿ, ಲೆಕ್ಕಪರಿಶೋಧನಾ ವರದಿ ಹಾಗು ಹಲವು ಲೆಕ್ಕಾಚಾರದ ಬಗ್ಗೆ ಚರ್ಚಿಸಲಾಯಿತು. ಸಮಾಜದ ಜಾಗದ ದಾಖಲೀಕರಣ, ಹಿಂದೆ ಕೊಡವರು ಹಲವು ಸರ್ಕಾರಿ ಕಚೇರಿಗಳಿಗೆ ನೀಡಿದಂತ ಜಾಗದಲ್ಲಿ ದಾನಿಗಳ ಹೆಸರೇ ಇಂದು ಮರೆಯಾಗಿದ್ದು ಆ ಜಾಗದಲ್ಲಿ ದಾನಿಗಳ ಹೆಸರಿನ ಫಲಕವನ್ನು ಇಡುವಂತಾಗ ಬೇಕೆಂದು ಸದಸ್ಯರು ಒತ್ತಾಯಿಸಿದರು.


ಸನ್ಮಾನ: ಮರಗೋಡುವಿನ ತಾತಪಂಡ ಶೀಲಾರವರು ೬ ಮಕ್ಕಳನ್ನು ಸಾಕಿಸಲಹುತ್ತಿದ್ದು ಅವರಿಗೆ ಸಮಾಜದ ಪರವಾಗಿ ಸನ್ಮಾನಿಸಿ ರೂ.೨೫ ಸಾವಿರ ನಗದು ನೀಡಿ ಗೌರವಿಸಲಾಯಿತು.


ನಿರ್ದೇಶಕಿ ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ ಸ್ವಾಗತಿಸಿ, ಜಂಟಿನಕಾರ್ಯದರ್ಶಿ ನಂದಿನೆರವಂಡ ದಿನೇಶ್ ವಂದಿಸಿದರು. ವೇದಿಕೆಯಲ್ಲಿ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ, ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮಂಡಿರ ಸದಾಮುದ್ದಪ್ಪ, ಕಾಳಚಂಡ ಅಪ್ಪಣ, ಪುತ್ತರಿರ ಕರುಣ್ ಕಾಳಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net