ಗ್ರಾಮೀಣ ಕ್ರೀಡೆಗಳಿಂದ ಬೌದ್ಧಿಕ ಸಾಮಾರ್ಥ್ಯ ವೃದ್ಧಿ

9KDR1 (1)
Published on

ಕಡೂರು: ಬ್ಯಾಲದಲ್ಲಿ ಮಕ್ಕಳು ಸದ್ಗುಣಗಳನ್ನು ಮೈಗೂಡಿಸಿಗೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ್ ಹೇಳಿದರು.

ಚಿಕ್ಕನಲ್ಲೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕೆಲಕಾಲ ಮಕ್ಕಳೊಂದಿಗೆ ಬೆರೆತು ನಂತರ ವಿಜಯವಾಣಿ ಜತೆ ಮಾತನಾಡಿ, ಮಕ್ಕಳ ಮನಸ್ಸು ಹೆಚ್ಚು ಮುಗ್ದತೆಯಿಂದ ಕೂಡಿರುತ್ತದೆ. ಅಧುನಿಕ ಭರಾಟೆಯಲ್ಲಿ ಮೊಬೈಲ್ ಗೀಳನ್ನು ಹಚ್ಚಿಕೊಂಡಿರುವ ಮಕ್ಕಳನ್ನು ಅದರಿಂದ ತಪ್ಪಿಸಿ ಹೆಚ್ಚು ಗ್ರಾಮೀಣ ಆಟದ ಕಡೆ ಆಸಕ್ತಿವಹಿಸಿದರೆ ಬೌದ್ದಿಕ ಸಾಮಾರ್ಥ್ಯ ವೃದ್ಧಿಯಾಗಲು ಸಹಕಾರಿಯಾಗುತ್ತವೆ. ಸರ್ಕಾರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಮಗುವಿನ ಬೆಳವಣಿಗೆ ಬಗ್ಗೆ ಪೋಷಕರು ಹಾಗೂ ಬೋಧಕರು ಹೆಚ್ಚು ನಿಗಾವಹಿಸಿದರೆ ಮಕ್ಕಳು ದಾರಿ ತಪ್ಪುವುದನ್ನು ತಪ್ಪಿಸಬಹುದಾಗಿದೆ. ಅವರ ಮನೋವಿಜ್ಞಾನದ ಬಗ್ಗೆ ನಿಗಾವಹಿಸಿ ಅವರಲ್ಲಿನ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.

ಅಂಗನವಾಡಿ ಕೇಂದ್ರದ ವ್ಯವಸ್ಥೆ ಮತ್ತು ಬಾಲ ಸಮಿತಿಗಳ ಸಭೆಗಳ ಬಗ್ಗೆ ಮಾಹಿತಿ ಪಡೆದು ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಹಾಗೂ ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಸುವಂತೆ ಕೇಂದ್ರದ ಮೇಲ್ವಿಚಾರಕರಿಗೆ ಸೂಚಿಸಿದರು. ಬಳಿಕ ಗ್ರಾಮದ ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಊಟ ಮಾಡಿ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net