ಚಿತ್ರಕಲೆಯಿಂದ ಮಕ್ಕಳ ಮನಸ್ಸು ವಿಕಸನ

ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಜೆಎಸ್‌ಎಸ್ ಬಾಲಜಗತ್ ಶಾಲಾ ಆವರಣದಲ್ಲಿ ಆಯೋಜಿಸಿರುವ ‘ಚಿತ್ರಕಲಾ ಶಿಬಿರ’ವನ್ನು ಬುಧವಾರ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಎ.ಪಿ.ಚಂದ್ರಶೇಖರ, ಪ್ರೊ.ಮೊರಬದ ಮಲ್ಲಿಕಾರ್ಜುನ,  ಎಸ್.ಎಂ.ಜಂಬುಕೇಶ್ವರ ಇದ್ದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಜೆಎಸ್‌ಎಸ್ ಬಾಲಜಗತ್ ಶಾಲಾ ಆವರಣದಲ್ಲಿ ಆಯೋಜಿಸಿರುವ ‘ಚಿತ್ರಕಲಾ ಶಿಬಿರ’ವನ್ನು ಬುಧವಾರ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಎ.ಪಿ.ಚಂದ್ರಶೇಖರ, ಪ್ರೊ.ಮೊರಬದ ಮಲ್ಲಿಕಾರ್ಜುನ, ಎಸ್.ಎಂ.ಜಂಬುಕೇಶ್ವರ ಇದ್ದರು.
Published on

ಮೈಸೂರು: ಮನಸ್ಸಿಗೂ, ಬಣ್ಣಕ್ಕೂ ನಿಕಟವಾದ ಸಂಬಂಧವಿದ್ದು, ಚಿತ್ರಕಲೆಯಿಂದ ಮಕ್ಕಳ ಮನಸ್ಸು ವಿಕಸನವಾಗುತ್ತದೆ ಎಂದು ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಜೆಎಸ್‌ಎಸ್ ಬಾಲಜಗತ್ ಶಾಲಾ ಆವರಣದಲ್ಲಿ ಆಯೋಜಿಸಿರುವ ‘ಚಿತ್ರಕಲಾ ಶಿಬಿರ’ವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕೆಲೆ ಎನ್ನುವುದು ಒಂದು ಅಳಿಸಲಾಗದ ಗುರುತು. ಚಿತ್ರಕಲೆಗೆ ಸುಮಾರು 40 ಸಾವಿರ ವರ್ಷಗಳ ಇತಿಹಾಸ ಇದೆ. ಶಿಲಾಯುಗದಿಂದ ಇಂದಿನವರೆಗೂ ಈ ಕಲಾಪ್ರಕಾರ ನಮ್ಮ ಜನ ಜೀವನದೊಂದಿಗೆ ಹಾಸುಹೊಕ್ಕಾಗಿ ವಿಕಾಸಗೊಂಡಿದೆ. ವ್ಯಕ್ತಿ ತನ್ನ ತನವನ್ನು ಅಭಿವ್ಯಕ್ತಿಗೊಳಿಸುವ ಬಹು ದೊಡ್ಡ ಮಾಧ್ಯಮವಾಗಿ ಚಿತ್ರಕಲೆ ಹೊರಹೊಮ್ಮಿದೆ. ಮಕ್ಕಳು ಬಳಸುವ ಬಣ್ಣ, ಬರೆಯುವ ಚಿತ್ರದ ಮೂಲಕ ಅವರ ಮಾನಸಿಕ ಸ್ಥಿತಿ-ಗತಿಯನ್ನು ಅಳೆಯಬಹುದು. ಮಕ್ಕಳ ಮನಸ್ಸು ಕಲೆಯಿಂದ ಉತ್ತಮವಾಗಿ ಬೆಳವಣಿಗೆಯಾಗುತ್ತದೆ ಎಂದರು.

ಚಿತ್ರಕಲೆ ಎನ್ನುವುದು ಮಗುವಿನ ರಚನ ಸಾಮಾರ್ಥ್ಯದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುತ್ತದೆ. ಮಕ್ಕಳಲ್ಲಿನ ಭಾವಾಭಿವ್ಯಕ್ತಿ, ಕಲ್ಪನಾ ಶಕ್ತಿಯ ಬೆಳವಣಿಗೆಗೆ ವೇದಿಕೆಯಾಗಿದೆ. ಮಕ್ಕಳು ಚಿತ್ರಕಲೆಯ ಮೂಲಕ ಸಂವೇದನಾ ಶೀಲತೆಯೊಂದಿಗೆ ಹೊರ ಜಗತ್ತಿನ ಜತೆ ಸಂವಾದಿಸುತ್ತಾರೆ ಎಂದು ಬಣ್ಣಿಸಿದರು. ಮಕ್ಕಳ ಚಿತ್ರಕಲೆಯನ್ನು ಶುದ್ಧವಾದ ಕಲೆ ಎನ್ನಬಹುದು. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಂಬಲಿಸಬೇಕಾದ ಕರ್ತವ್ಯ ಪಾಲಕರು ಮತ್ತು ಸಮುದಾಯದ್ದಾಗಿದೆ ಎಂದು ಆಶಿಸಿದರು.

ಕಾವಾ ಕಾಲೇಜಿನ ಗ್ರಾಫಿಕ್ ವಿಭಾಗದ ರೀಡರ್ ಎ.ಪಿ.ಚಂದ್ರಶೇಖರ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಚಿತ್ರಕಲೆಯ ಕೊಡುಗೆಯೂ ದೊಡ್ಡದು. ಮಕ್ಕಳು ಏಕಾಗ್ರತೆ ಮೈಗೂಡಿಸಿಕೊಳ್ಳಲು ಇದು ಸಹಕಾರಿ. ಈ ಹಿನ್ನೆಲೆಯಲ್ಲಿ ಮೊಬೈಲ್ ಗೀಳಿನಿಂದ ಮಕ್ಕಳು ಹೊರಬಂದು ಚಿತ್ರಕಲೆ ಅಂತಹ ಶುದ್ಧ ಮನರಂಜನಾ ಚಟುವಟಿಕೆಯಲ್ಲಿ ಒಳಗೊಳ್ಳಬೇಕು. ಪಾಲಕರು ಸಹ ಮಕ್ಕಳ ಕಲಿಕಾ ಶಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಜೆಎಸ್‌ಎಸ್ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಶಿಬಿರದ ಸಂಚಾಲಕ ಎಸ್.ಎಂ.ಜಂಬುಕೇಶ್ವರ ಇದ್ದರು. ಚಿತ್ರಕಲೆಗೆ ಮೀಸಲಾದ ಶಿಬಿರ ಇದಾಗಿದ್ದು. 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಏಪ್ರಿಲ್ 23 ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net