

ಕೊಪ್ಪ : ರೈತರ ನಿರಂತರ ಸಹಕಾರ ಮತ್ತು ಆಡಳಿತ ಮಂಡಳಿಯ ದೃಢ ನಿರ್ಧಾರದಿಂದ ಪಿಕಾರ್ಡ್ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ ಲಾಭ ಕಂಡು ನೂತನ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್ ಇನೇಶ್ ಹೇಳಿದರು.
ಪಟ್ಟಣದ ಪರಭವನದಲ್ಲಿ ಪಿಕಾರ್ಡ್ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸಕೊಪ್ಪ ಕೃಷ್ಣರಾಯರು ರೈತರಿಗೆ ಬ್ಯಾಂಕ್‌ನಿಂದ ಉಪಯೋಗವಾಗಬೇಕು ಎಂಬ ಉದ್ದೇಶದಿಂದ 1930ರಂದು ಕೊಪ್ಪ ದಲ್ಲಿ ಬ್ಯಾಂಕ್ ಸ್ಥಾಪನೆ ಮಾಡಿದರು. ನಂತರದಲ್ಲಿ ಬ್ಯಾಂಕ್ ಏಳು-ಬೀಳುಗಳನ್ನು ಕಂಡಿದ್ದು, ನಬಾರ್ಡ್‌ನಲ್ಲಿ ಬ್ಯಾಂಕ್ ಸುಸ್ತಿದಾರರಾಗಿತ್ತು. ಆಗ ರೈತರಿಗೆ ನಿರೀಕ್ಷೆಯ ಮಟ್ಟದಲ್ಲಿ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತಿರಲ್ಲಿ. ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ರವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಬಡ್ಡಿಮನ್ನಾ ಯೋಜನೆಯಿಂದ ಬ್ಯಾಂಕ್‌ಲಾಭದತ್ತ ಮುಖ ಮಾಡಲು ಸಾಧ್ಯವಾಗಿದೆ ಎಂದರು ತಿಳಿಸಿದರು.
ಶಾಸಕ ರಾಜೇಗೌಡರು ತಮ್ಮ ಅನುದಾನದಲ್ಲಿ 10 ಲಕ್ಷ ರೂ., ಹಾಗೂ ಕೆಆರ್‌ಇಡಿಎಲ್ ನಿಂದ 20 ಲಕ್ಷ ರೂ. ಹಣ ಕೊಡಿಸಿದ ಕಾರಣ ಇಂದು ಉತ್ತಮ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ನಮ್ಮ ಆಡಳಿತ ಮಂಡಳಿಯಿಂದ ರೈತರ ಹಣಕ್ಕೂ ನ್ಯಾಯ ದೊರಕಿಸಲು ಕೆಲಸ ಮಾಡಲಾಗಿದೆ. ರೈತರು ಹಾಗೂ ಬ್ಯಾಂಕ್‌ನ ಹಿತದೃಷ್ಠಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರಿಂದ ಬ್ಯಾಂಕ್ ಅಭಿವೃದ್ಧಿಹೊಂದಿ ರೈತರು ಸುಸ್ತಿ ಸಾಲದಿಂದ ಮುಕ್ತರಾಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಶೃಂಗೇರಿ ಶ್ರೀಮಠದ ವೇದಬ್ರಹ್ಮ ಕೃಷ್ಣ ಭಟ್ ಮಾತನಾಡಿ, ಪರಹಿತ, ಪರರ ಶ್ರೇಯಸ್ಸು ಬಯಸುವುದನ್ನು ಸನಾತನ ಧರ್ಮ ತಿಳಿಸುತ್ತದೆ. ರೈತರ ಏಳಿಗೆಯನ್ನು ಬಯಸುವ ಪಿಕಾರ್ಡ್ ಬ್ಯಾಂಕ್ ಮುಂದಿನ ದಿನದಲ್ಲಿ ಇನ್ನಷ್ಟು ಕೃಷಿಕರಿಗೆ ನೆರವಾಗಲಿ, ಕೃಷಿಕರು ಸಹ ಬ್ಯಾಂಕ್‌ನ ಜತೆಗೆ ನಿಂತು ಉತ್ತಮ ವ್ಯಾಪಾರ, ವಾಹಿವಾಟು ನಡೆಸಬೇಕು ಎಂದರು.
23ಕೊಪ್ಪ 01
ಕೊಪ್ಪದಲ್ಲಿ ಎಸ್.ವಿ.ಟಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪಿಕಾರ್ಡ್ ಬ್ಯಾಂಕ್‌ನ ಕಟ್ಟಡವನ್ನು ಶೃಂಗೇರಿ ಶ್ರೀಮಠದ ವೇದಬ್ರಹ್ಮ ಕೃಷ್ಣ ಭಟ್ ಉದ್ಘಾಟಿಸಿದರು. ಎಚ್.ಎಸ್.ಇನೇಶ್, ಹರೀಶ್.ವಿ,ರಾಮಸ್ವಾಮಿ ಇದ್ದರು.