ಹಂತ ಹಂತವಾಗಿ ಎಲ್ಲ ರಸ್ತೆಗಳ ಅಭಿವೃದ್ಧಿ

20Kdl01
Published on

ಸಂಶಿ ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಬರುತ್ತಿದ್ದು, ತಾಲೂಕಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕಿ ಕುಸá-ಮಾವತಿ ಶಿವಳ್ಳಿ ಹೇಳಿದರು.
ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಶಿಗ್ಲಿಯವರ ಮನೆಯಿಂದ ಕಳಸದ ಕ್ರಾಸ್​ವರೆಗೆ ಎಸ್​ಸಿಪಿ ಯೋಜನೆಯಡಿ 56.70 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿ.ಡಿ. ಹಿರೇಗೌಡ್ರ, ವಿಜಯಕುಮಾರ ಹಾಲಿ, ದಯಾನಂದ ಕುಂದೂರ, ವಿ.ವಿ. ರಂಗನಗೌಡ್ರ, ರಾಜು ಪಾಟೀಲ, ಮಂಜುನಾಥ ಗದಗಿನಮಠ, ವಿನಾಯಕ ಮನ್ನಾಳಕೇರಿ, ಬಸವರಾಜ ನಾಗನಾಯ್ಕರ, ಬಸವರಾಜ ಶಿರಮಾಪೂರ, ಮಂಜವ್ವ ದಂಡಿನ, ರತ್ನಕ್ಕ ಹಿರೇಗೌಡ್ರ, ಕಲೀಲ ಹುಣಸಿಕಟ್ಟಿ, ಶಂಕ್ರಣ್ಣ ಮಾಕಣ್ಣವರ, ಜಾವೀದ ಕಿಲ್ಲೇ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net