ಅಭಿವೃದ್ಧಿ, ಸಂಗೀತದ ಮೂಲಕ ಚಿರಸ್ಥಾಯಿ

26hdk02-Web
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಹಿಡಕಲ್ ಡ್ಯಾಮ್‌ನ ಮಹಿಳಾ ಕಲ್ಯಾಣ ಸಂಸ್ಥೆಯ ಕುಟೀರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉದಯಕುಮಾರ ಕಮ್ಮಾರ, ಪ್ರಕಾಶ ಹೊಸಮನಿ, ಎಸ್.ಐ. ನದಾಫ್, ಮಹಾದೇವಿ ಹಳಿಜೋಳ ಇತರರಿದ್ದರು.
Published on

ಹಿಡಕಲ್ ಡ್ಯಾಂ: ಅಗಲಿದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಹಿಡಕಲ್ ಡ್ಯಾಮ್‌ನ ಮಹಿಳಾ ಕಲ್ಯಾಣ ಸಂಸ್ಥೆಯ ಕುಟೀರದಲ್ಲಿ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವೇಶ್ವರಯ್ಯ ಪ್ರೌಢಶಾಲೆ ಮುಖ್ಯಶಿಕ್ಷಕ ಉದಯಕುಮಾರ ಕಮ್ಮಾರ, ಎಸ್‌ಪಿಬಿ ಅವರು ತಮ್ಮ ಹಾಡಿನ ಮೂಲಕ ದೇಶದ ಸಂಗೀತ ಪ್ರಿಯರ ಗಮನ ಸೆಳೆದಿದ್ದರು. ಅವರ ಅಗಲಿಕೆ ಸಂಗೀತ ಲೋಕಕ್ಕೆ ನಷ್ಟವಾಗಿದೆ ಎಂದರು.

ಹುಕ್ಕೇರಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಕರೊನಾದಿಂದ ನಿಧನರಾಗಿರುವುದು ಅತೀ ದುಃಖಕರ ಸಂಗತಿ. ನಾಡು ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದೆ. ಸಂಗೀತ ಮಾಂತ್ರಿಕ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಶಿಕ್ಷಕರಾದ ಎಸ್.ಐ. ನದಾಫ್, ಹಿರಿಯ ಆರೋಗ್ಯ ಸಹಾಯಕ ಮಹಾದೇವಿ ಹಳಿಜೋಳ, ಸಾಹಿತಿ ಎಸ್.ಎಂ. ಶಿರೂರ, ಹಿಡಕಲ್ ಡ್ಯಾಂ ಸಿಆರ್‌ಪಿ ರಾಜಗೋಪಾಲ ಮಿತ್ರಣ್ಣವರ, ಶಿವಾನಂದ ಬಡಿಗೇರ, ಮಹಾವೀರ ತೆಳಗಡಿ, ಶಿವಾನಂದ ನಾವಿ, ಬಂಡೆಪ್ಪ ಮಾದರ, ಮಹಾಂತೇಶ ಹೊಸಮನಿ, ಬಸವರಾಜ ಹರಿಜನ, ಪತ್ರಕರ್ತರಾದ ರಮೇಶ ನಾಯಿಕ, ಎ.ಎಂ. ಕರ್ನಾಚಿ, ದೀಪಕ ನಾಡಗೌಡರ, ಮಹಿಳಾ ಕಲ್ಯಾಣ ಸಂಸ್ಥೆಯ ಅಧೀಕ್ಷಕಿ ರಾಧಾ ಬಡಿಗೇರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net