ಲಕ್ಷ್ಮೀ ಲೇಔಟ್​ನಲ್ಲಿ ಅಭಿವೃದ್ಧಿ ಮರೀಚಿಕೆ

road
Published on

ಕೋಲಾರ: ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಲಕ್ಷಿ$್ಮ ಲೇಔಟ್​ನಲ್ಲಿ ಕಳೆದ 20 ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದು, ಕುಡಿಯುವ ನೀರು, ರಸ್ತೆ, ವಿದ್ಯುತ್​ ದೀಪ ಸೇರಿ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿದ್ದು, ಸದರಿ ಲೇಔಟ್​ಅನ್ನು ಪುರಸಭೆ ಸಂಪೂರ್ಣ ಕಡೆಗಣಿಸಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಸುಮಾರು 5,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಲೇಔಟ್​ನಲ್ಲಿ ಮಾಲೂರು ಪಟ್ಟಣದ ಹೊಸೂರು ರಸ್ತೆಯ ಇಂದಿರಾನಗರದ ಪಕ್ಕದಲ್ಲಿದ್ದು, ಸುಮಾರು 1,000ಕ್ಕೂ ಹೆಚ್ಚು ಮತದಾರರು ಇದ್ದಾರೆ. ಹೊಸೂರು ರಸ್ತೆ ಕೈಗಾರಿಕೆಗಳಾ ಪ್ರಾಂಗಣವಾಗಿರುವುದರಿಂದ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ವಲಸಿಗರು ಈ ಲೇಔಟ್​ನಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದಾರೆ.

ಸದರಿ ಬಡಾವಣೆಯಲ್ಲಿರುವ ರಸ್ತೆಗಳು ಮಣ್ಣು ರಸ್ತೆಗಳಾಗಿ ರೂಪಾಂತರವಾಗಿದ್ದು, ಮಳೆ ಬಂದರೆ ಕೆಸರು ಗದ್ದೆಗಳಾಗುತ್ತವೆ. ರಸ್ತೆಗಳಲ್ಲಿ ಹಳ್ಳ ಬಿದ್ದರೆ ಸ್ಥಳಿಯರೇ ಮುಚ್ಚಬೇಕಾದ ಪರಿಸ್ಥಿತಿ ಇದೆ. ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಬೀದಿಗಳು ಸದಾ ಕತ್ತಲಲ್ಲೇ ಇರುತ್ತವೆ. ಬಡಾವಣೆ ನಿಮಾರ್ಣವಾಗಿ 20 ವರ್ಷ ಕಳೆದರೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವುದು ದುರಂತ.

ವಾರಕ್ಕೊಮ್ಮೆಯಾದರೂ ಕಸ ವಿಲೇವಾರಿಗೆ ಪುರಸಭೆಯವರು ಬರುತ್ತಿಲ್ಲ. ಲೇಔಟ್​ನಲ್ಲಿ ಕಸದ ರಾಶಿಗಳು ರಾರಾಜಿಸುತ್ತಿದ್ದು, ಕಸ ಕೊಳೆತು ವಾಸನೆ ಬರುವಂತಾಗಿದೆ. ಸದರಿ ಬಡಾವಣೆಯಲ್ಲಿ ವಲಸಿಗರೇ ಹೆಚ್ಚಾಗಿರುವುದರಿಂದ ಪಾರ್ಸೆಲ್​ ಕವರ್​, ತ್ಯಾಜ್ಯಗಳನ್ನು ರಸ್ತೆ ಪಕ್ಕದಲ್ಲೇ ಎಸೆಯುತ್ತಿದ್ದಾರೆ. ಇದರಿಂದ ದುರ್ವಾಸನೆ ಬರುವಂತಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಲಕ್ಷ್ಮೀ ಲೇಔಟ್​ನಲ್ಲಿ ಮನೆ ನಿಮಾರ್ಣ ಮಾಡಿ 15 ವರ್ಷವಾಗಿದೆ. ಮೂಲ ಸೌಲಭ್ಯಗಳೇ ಇಲ್ಲ. ಸ್ಥಳಿಯರೇ ರಸ್ತೆಗಳನ್ನು ನಿರ್ಮಿಸಿಕೊಳ್ಳುವಂತಾಗಿದೆ. ಈ ಹಿಂದೆ ಶಾಸಕರಾಗಿದ್ದ ಮಂಜುನಾಥಗೌಡ ಲೇಔಟ್​ಗೆ ಭೇಟಿ ನೀಡಿ, ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ನಂತರ ಅಧಿಕಾರಿಗಳು ಲೇಔಟ್​ಅನ್ನು ಮರೆತಿದ್ದಾರೆ. ಇಲ್ಲಿಂದ ಆಯ್ಕೆಯಾದ ಪುರಸಭಾ ಸದಸ್ಯರೂ ಇತ್ತ ಗಮನ ಹರಿಸುತ್ತಿಲ್ಲ. ರಾತ್ರಿ ವೇಳೆ ವಿದ್ಯುತ್​ ದೀಪಗಳು ಇಲ್ಲದೇ ಇರುವುದರಿಂದ ಓಡಾಡಲು ಭಯದ ವಾತಾವರಣ ಉಂಟಾಗಿದೆ.

 -ಲಾವಣ್ಯಾ, ಮಾಲೂರು

ಲಕ್ಷ್ಮೀ ಲೇಔಟ್​ ಟೌನ್​ಪ್ಲಾನಿಂಗ್​ನಿಂದ ಅನುಮತಿ ಪಡೆಯದೆ ಲೇಔಟ್​ ನಿಮಾರ್ಣವಾಗಿದೆ. ಕಸ ವಿಲೇವಾರಿ ಮಾಡುತ್ತೇವೆ. ವಿದ್ಯುತ್​ ದೀಪ ನೀಡುತ್ತೇವೆ. ರಸ್ತೆಗಳ ನಿಮಾರ್ಣಕ್ಕೆ ಸಭೆಯಲ್ಲಿ ಅನುಮತಿ ಪಡೆಯಬೇಕು. ಅವರು ಯಾವ ರಸ್ತೆ ನಿಮಾರ್ಣಕ್ಕೆ ಅನುಮತಿ ನೀಡುತ್ತಾರೆಯೋ ಆ ರಸ್ತೆಗಳನ್ನು ಹಂತ ಹಂತವಾಗಿ ಅನುದಾನದ ಆಧಾರದ ಮೇಲೆ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಇತ್ತೀಚೆಗೆ ಆ ಭಾಗದಿಂದ ಆಯ್ಕೆ ಆಗಿರುವ ಪುರಸಭಾ ಸದಸ್ಯೆ ಸುಮಿತ್ರಾ ಅನರ್ಹಗೊಂಡಿದ್ದಾರೆ. ಆದರೂ ಸಹ ಆಲೇಔಟ್​ಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು.

 -ಪ್ರದಿಪ್​, ಮುಖ್ಯಾಧಿಕಾರಿ ಮಾಲೂರು ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net