ಟೀಕಾಕಾರರಿಗೆ ಅಭಿವೃದ್ಧಿಯೇ ಉತ್ತರ

FotoJet 2222
Published on

ಕೊತ್ತೂರು ಮಂಜುನಾಥ್​ ಹೇಳಿಕೆ | 11.50 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕದರೀಪುರ/ ಕೋಲಾರ:  ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿದೆ, ಕೇಳಿದಷ್ಟು ಅನುದಾನ ತಂದು ಅಭಿವೃದ್ಧಿ ಮಾಡಲು ಸಿದ್ಧರಿದ್ದೇವೆ. ಮಾತಾನಾಡುವವರಿಗೆ ಅಭಿವೃದ್ಧಿ ಮೂಲಕವೇ ಉತ್ತರ ದೊರೆಯಲಿದ್ದು, ತಪ್ಪು ಮಾಡಿದವರನ್ನು ಸೀತಿ ಬೈರವೇಶ್ವರ ಸ್ವಾಮಿಯೇ ಶಿಕ್ಷಿಸಲಿ ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದುರು.

ಕೋಲಾರ ತಾಲಕು ಸೀತಿ ಗ್ರಾಪಂ ವತಿಯಿಂದ ಸೀತಿ ಬೈರವೇಶ್ವರ ದೇವಾಲಯದ ಬಳಿ ನಿರ್ಮಿಸಿುರವ 23 ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಸೀತಿ ಬೈರವೇಶ್ವರ ಸ್ವಾಮಿ ದೇವಾಲಯಕ್ಕೆ ಮೂುರ ರಾಜ್ಯಗಳ ಭಕ್ತರು ಆಗಮಿಸುತ್ತಿದ್ದು, ಅಗತ್ಯವಾಗಿ ದೇವಾಲಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಯಾವುದೇ ಅನುದಾನವಿಲ್ಲದೆ 23 ಅಂಗಡಿ ನಿರ್ಮಿಸಿುರವ ಸೀತಿ ಗ್ರಾಪಂ, ಮಾದರಿ ಪಂಚಾಯಿತಿಗಳಲ್ಲಿ ಒಂದಾಗಿದೆ ಎಂದುರ.

ದೇವಾಲಯದ ಪ್ರಗತಿಗಾಗಿ 10 ಲಕ್ಷ ರುಪಾಯಿ ನೀಡಿದ ಮಂಜುನಾಥ್​, ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಮತ್ತು ಎಂಎಲ್ಸಿ ನಸೀರ್​ ಅಹಮದ್​ ಅವರಿಂದಲೂ ಅನುದಾನಗಳನ್ನು ಕೊಡಿಸುವ ಭರವಸೆ ನೀಡಿದುರ.

ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​, ಸೀತಿ ಗ್ರಾಪಂ ಅಧ್ಯಕ್ಷೆ ಕವಿತಾ ಮುನಿರಾಜು, ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್​, ತಾಪಂ ಇಒ ಮಂಜುನಾಥ್​, ಎಇಇ ಮಂಜುನಾಥ್​, ಮುಖಂಡಾರದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುಳಿರ, ವೀರೇದ್ರ ಪಾಟೀಲ್​, ಅಂಕತಟ್ಟಿ ಬಾಬು, ಉರಟ ಅಗ್ರಹಾರ ಚೌಡೆರಡ್ಡಿ, ಸಕಲೇಶ್​, ಕುಮಾರ್​,  ರಾಜಕುಮಾರ್​, ಪೆರ್ಜೇನಹಳ್ಳಿ ನಾಗೇಶ್​, ಬೈರಪ್ಪ, ಮುನಿರಾಜು ಮುಜಾರಯಿ ತಹಸೀಲ್ದಾರ್​ ಶ್ರೀನಿವಾಸ್​ ನಿರ್ಮಿತಿ ಕೇಂದ್ರದ ಅಶ್ವಿನ್​ ಇದ್ದರು.

ವೇಮಗಲ್​ ಹೋಬಳಿಗೆ ಕೋಟಿ ಕೋಟಿ ಅನುದಾನಚಂಜಿಮಲೆ ಗ್ರಾಮದಿಂದ ಕಡಗಟ್ಟೂುರ, ಸೀತಿಹೊಸೂುರ ಮತ್ತು ಬೈಂರಡಹಳ್ಳಿವೆರಗೆ ಸೆರ್ತ ಅಭಿವೃದ್ಧಿಗೆ 5 ಕೋಟಿ, ಬೈಂರಡಹಳ್ಳಿ ಕೆೆರ ಅಭಿವೃದ್ಧಿಗೆ 3.5 ಕೋಟಿ, ಕಡಗಟ್ಟೂುರ ಗ್ರಾಮದಿಂದ ಮಠಪುರ & ಕ್ಯಾಲನೂುರ&ತಿಪ್ಪೇನಹಳ್ಳಿ ಸೆರ್ತಗೆ 2 ಕೋಟಿ, ಎಂಎಲ್ಸಿ ಅನಿಲ್​ ಕುಮಾರ್​ ಅನುದಾನದಲ್ಲಿ ಸೀತಿ ಬೆಟ್ಟದಲ್ಲಿುರವ ದೇವಾಲಯದ ಅನ್ನಛತ್ರ ನಿಮಾರ್ಣಕ್ಕೆ 95 ಲಕ್ಷ, ಮಹಿಳೆಯರ ವಿಶ್ರಾಂತಿ ಕೊಠಡಿಗೆ 25 ಲಕ್ಷ ಹಾಗೂ ಮುಡಿ ಕಟ್ಟು ನಿಮಾರ್ಣಕ್ಕೆ 15 ಲಕ್ಷ ಸೇರಿ ಒಟ್ಟು 11.50 ಕೋಟಿ ಅನುದಾನವನ್ನು ಕೋಲಾರ ತಾಲೂಕಿನ ವೇಮಗಲ್​ ಹೋಬಳಿಗೆ ನೀಡಲಾಗಿದೆ.ಜವಾಬ್ದಾರಿ ಸ್ಥಾನದಲ್ಲಿುರವವುರ ಯಾುರ ಸಹ ಸುಮ್ಮನೆ ಬಂದು ಪೂಜೆ ಮಾಡುವುದಿಲ್ಲ, ಅನುಮೋದನೆ ಸಿಕ್ಕಿದ ನಂತರವೇ ಭೂಮಿಪೂಜೆ ಮಾಡಿದ್ದು, ನಿರ್ಮಾಣ ಪ್ರಕ್ರಿಯೆಗೆ ತಡೆ ಒಡ್ಡುವುದು ಸಲ್ಲ! ಅನಿಲ್​ ಕುಮಾರ್​ವಿಧಾನ ಪರಿಷತ್​ ಶಾಸಕರುಮಾತಿನ ಚಕಮಕಿಸೆರ್ತಗಳ ಅಭಿವೃದ್ಧಿಗೆ ಭೂಮಿಪೂಜೆ ಮಾಡುವ ವೇಳೆ ಕೆ.ಎಚ್​.ಮುನಿಯಪ್ಪ ಅವರ ಬೆಂಬಲಿಗುರ ಸೀತಿ ಹೊಸೂುರ ಮುಳಿರಗೌಡಗೆ ಟೆಂಡರ್​ ಅನುಮೋದನೆ ದೊೆರತಿದೆಯೇ ಎಂದು ಪ್ರಶ್ನಿಸಿದುರ. ಆಗ ಶಾಸಕುರ ಸ್ಪಷ್ಟನೆ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಎಂಎಲ್​ಸಿ ಅನಿಲ್​ಕುಮಾರ್​ ಮತ್ತು ಮುಳಿರಗೌಡನ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶಾಸಕರಿಂದ ಸ್ಪಷ್ಟನೆ ನೀಡುತ್ತಿುರವಾಗ ಗಲಾಟೆ ಹೆಚ್ಚಾದ ಕಾರಣ ಟೆಂಡರ್​ ಅನುಮೋದನೆ ಪಡೆದುಕೊಂಡೇ ಭೂಮಿಪೂಜೆ ಮಾಡುತ್ತಿದ್ದು, ವಿನಾಕಾರಣ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಶಾಸಕೂರ ಕಿಡಿಕಾರಿದುರ. ಸ್ಥಳದಲ್ಲಿದ್ದ ಪೊಲೀಸುರ ಎರಡೂ ಗುಂಪಿನವರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net