ಜನರ ಸಹಕಾರದಿಂದ ಅಭಿವೃದ್ಧಿ ಸಾಧ್ಯ

27Muragtod1
Published on

ಮುರಗೋಡ: ಕೇವಲ ಸರ್ಕಾರದ ಯೋಜನೆಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸ್ಥಳಿಯರ ಸಹಕಾರವಿದ್ದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ದಲಿತ ಮುಖಂಡ ಉದಯಕುಮಾರ ಚಿಕ್ಕಣ್ಣವರ ಹೇಳಿದರು.

ಗ್ರಾಮದ ಡಾ.ಬಿ.ಆರ್​.ಅಂಬೇಡ್ಕರ್​ ನಗರದ ಮುಖ್ಯ ರಸ್ತೆಗೆ ಸ್ವಂತ ಖರ್ಚಿನಲ್ಲಿ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯ ಸಂಗಪ್ಪ ಬೆಳಗಾವಿ, ಎಪಿಎಂಸಿ ಸದಸ್ಯ ರಾಜು ಕಲಾಲ ಮಾತನಾಡಿದರು. ಪ್ರಕಾಶ ಹಟ್ಟಿಹೊಳಿ, ಮಲ್ಲಪ್ಪ ಕೀಲ್ಲೆದಾರ, ಸಂತೋಷ ಹಟ್ಟಿಹೊಳಿ, ಬಾಬು ಮೆಗೇರಿ, ಹರೀಶ ಪೂಜೇರಿ, ಪ್ರಕಾಶ ಕೆಳಗೇರಿ, ಸುಮಂತ ಚಿಣ್ಣನವರ, ಮಲ್ಲಿಕಾರ್ಜುನ ಕೇಳಗೇರಿ, ಸೋಮಲಿಂಗ ಕೆಳಗೇರಿ, ಶ್ರೀಶೈಲ ನುಗ್ಗಾನಟ್ಟಿ, ಪ್ರಕಾಶ ಚಿಣ್ಣನವರ, ಅನಿಲ ಪೂಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net