ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ ಸಾಧ್ಯ

ಹನುಮಸಾಗರದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಹಜರತ್ ಸೈಯದ ಪೈಸಲ್ ಪಾಷಾ ಇತರರಿದ್ದರು.
ಹನುಮಸಾಗರದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಹಜರತ್ ಸೈಯದ ಪೈಸಲ್ ಪಾಷಾ ಇತರರಿದ್ದರು.
Published on

ಹನುಮಸಾಗರ: ಶೈಕ್ಷಣಿಕವಾಗಿ ಪ್ರಗತಿಯಿಂದ ಮಾತ್ರ ಸಮುದಾಯದ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದು ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರು ಜಾತಿ ಬೇಧ ಮೀರಿ ಜಗತ್ತಿಗೆ ಉತ್ತಮ ಸಂದೇಶ ಸಾರಿದ್ದಾರೆ. ಮಹಾತ್ಮರ ಸದ್ಗುಣ, ಕಾಯಕನಿಷ್ಠೆ, ಜೀವನೋತ್ಸಾಹವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಯಾರಿಗೂ ತೊಂದರೆ ಆಗದಂತೆ ಎಲ್ಲರಿಗೂ ಸಂತೋಷ ನೀಡಿ ಒಗ್ಗಟ್ಟಿನಿಂದ ಬಾಳಬೇಕು. ದುರ್ಬಲ ಸಮಾಜ ದೂರವಾಗಿ, ಶಕ್ತಿಶಾಲಿ ಸಮಾಜ ನಿರ್ಮಿಸಬೇಕು. ಶಿಕ್ಷಣ, ಕಾಯಕ ಮತ್ತು ಒಗ್ಗಟ್ಟಿನಿಂದ ಸಮುದಾಯ ಅಭಿವೃದ್ಧಿಯಾಗಲಿದೆ. ಈ ದಾರಿಯಲ್ಲೇ ಶ್ರೇಷ್ಠ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸಮುದಾಯ ಒಗ್ಗಟ್ಟಿನಿಂದ ಹೋರಾಡಿದರೆ ಯಶಸ್ಸು ಸಾಧ್ಯ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಯುವಕರು ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಸತಿ ಪತಿಗಳು ಪರಸ್ಪರ ಅರಿತು ಸುಖಸಂಸಾರ ನಡೆಸಬೇಕು ಎಂದರು.

ಹಡಪದ ಸಮುದಾಯದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಹಜರತ್ ಸೈಯದ್ ಪೈಸಲ್ ಪಾಷಾ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಪಾಟೀಲ್ ಬಯ್ಯಪೂರ, ಮಾಜಿ ಶಾಸಕ ಕೆ.ಶರಣಪ್ಪ ವಕೀಲ, ಪ್ರಮುಖರಾದ ಬಸವರಾಜ ಹಳ್ಳೂರ, ಸಂಗಯ್ಯ ವಸ್ತ್ರದ, ವಿಶ್ವನಾಥ ಕನ್ನೂರ, ಮೈನುದ್ದೀನ್ ಖಾಜಿ, ಸೂಚಪ್ಪ ದೇವರಮನಿ, ಪ್ರಶಾಂತ ಗಡಾದ, ಸಂಕ್ರಪ್ಪ ಬಿಂಗಿ, ಪ್ರಲ್ಹಾದಾಚಾರ್ಯ ಕಟ್ಟಿ, ಜಗದೀಶ ಕುಂಬಾರ, ತಿಮ್ಮನಗೌಡ್ರ ಪೊಲೀಸ್‌ಪಾಟೀಲ್, ಮುತ್ತು ಪತ್ತಾರ, ಕ್ರೀಷ್ಣಪ್ಪ ಬಂಡರಗಲ್ಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net