

ವಿಜಯವಾಣಿ ಸುದ್ದಿಜಾಲ ಗುಬ್ಬಿ
ಕನ್ನಡ ಭಾಷೆ ಎಲ್ಲಿಯವರೆಗೆ ಅನ್ನದ ಭಾಷೆ ಆಗುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಕನ್ನಡ ಭಾಷೆ ಅನ್ನದ ಭಾಷೆಯಾದಾಗ ಕನ್ನಡ ಭಾಷೆ ವಿಶ್ವ ಮಾನ್ಯ ಭಾಷೆಯಾಗಿ ಹೊರಹೊಮ್ಮುತ್ತದೆ ಎಂದು ಸಮ್ಮೇಳನಾಧ್ಯ ಡಾ.ಜಯಪ್ಪ ಹೊನ್ನಾಳಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹನಿನಿಧಿ ಸಾಹಿತ್ಯ ಸಾಂಸತಿಕ ಕಲಾ ವೇದಿಕೆಯಿಂದ ಆಯೋಜಿದ್ದ ರಾಜ್ಯಮಟ್ಟದ ಗುಬ್ಬಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಕನ್ನಡದ ನೆಲದಲ್ಲಿ ಗೌರವ, ಸನ್ಮಾನ, ಧೀಮಂತ ಬದುಕು ಪ್ರಾಪ್ತವಾಗಬೇಕು. ಆಗ ಮಾತ್ರ ಕನ್ನಡ ಉಳಿಯುವುದಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರಿಗಳು ವ್ಯಾಪಾರಕ್ಕೆ ಬಂದು ಕನ್ನಡ ನೆಲದಲ್ಲಿ ತಮ್ಮ ಭಾಷೆಯನ್ನು ವಿಸ್ತರಿಸುತ್ತಾರೆ. ನಾವು ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಕಲಿಯುತ್ತೇವೆ. ನಾವು ನೆಲದ ಭಾಷೆ, ಮಾತೃ ಭಾಷೆ ಕನ್ನಡವನ್ನು ಕಲಿತು ನಮ್ಮ ಭಾಷೆಯನ್ನು ಶ್ರೀಮಂತ ಗೊಳಿಸಬೇಕು. ಗುಬ್ಬಿ 16ನೇ ಶತಮಾನದಲ್ಲಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿತ್ತು. ಗುಬ್ಬಿ ವೀರಣ್ಣನವರ ರಂಗಭೂಮಿ ಕೊಡುಗೆ ಅಪಾರವಾದದ್ದು, ಗುಬ್ಬಿಯ ಸಾಹಿತಿಗಳು ಈಗಲೂ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಸಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯ ಮುರಳಿಧರ ಹಾಲಪ್ಪ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸಿಯ ಸ್ಥಾನಮಾನ ಪಡೆದಿರುವುದು ಕನ್ನಡಿಗರ ಹೆಮ್ಮೆ. ಇಂಗ್ಲಿಷ್ ರೋಮನ್ ಭಾಷೆಗಳಿಂದ ಲಿಪಿ ಪಡೆದುಕೊಂಡಿದೆ. ಆದರೆ, ಕನ್ನಡ ಭಾಷೆಯು ತನ್ನ ಸ್ವಂತ ಲಿಪಿಯ ಮೂಲಕ ಕನ್ನಡದಲ್ಲಿ ಲಿಪಿ ಹೊಂದಿರುವ ಶ್ರೀಮಂತ ಭಾಷೆಯಾಗಿದೆ ಎಂದರು.
ಕರ್ನಾಟಕದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರೆಯಬೇಕು. ರೈಲ್ವೆ ಪರೀಕ್ಷೆ ಸೇರಿದಂತೆ ಯುಪಿಎಸ್ಸಿ ಪರೀಕ್ಷೆಗಳು ಕನ್ನಡದಲ್ಲಿ ಬರೆಯುವಂತಾಗಬೇಕು. ಇದರಿಂದ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡಲು ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ಅಧ್ಯೆ ಮಂಗಳಮ್ಮ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಶಿಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಮೂಲಕ ಯಶೋಮಾರ್ಗದ ಕಡೆಗೆ ಸಾಗಬೇಕು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಯತೀಶ್, ಪ್ರಾಂಶುಪಾಲ ಪ್ರಸನ್ನ. ಹನಿನಿಧಿ ಸಾಹಿತ್ಯ ಸಾಂಸತಿಕ ಕಲಾ ವೇದಿಕೆಯ ಸಂಸ್ಥಾಪಕ ಅಧ್ಯ ಅಂಜನ್ ಕುಮಾರ್, ವರುಣ್ ರಾಜ್, ಕಾರ್ತಿಕ್ ರಾಜ್ ಕುಮಾರ್ ಉಪಸ್ಥಿತರಿದ್ದರು.