ಸಹಕಾರಿ ಕ್ಷೇತ್ರ ಬೆಳೆದಂತೆ ಅಭಿವೃದ್ಧಿ ಸಾಧ್ಯ

23BRG1.JPG
Published on

ಬೋರಗಾಂವ: ಸಹಕಾರಿ ಕ್ಷೇತ್ರ ಬೆಳೆದಂತೆ ಗ್ರಾಮೀಣಾಭಿವೃದ್ಧಿ ಸಾಸಲು ಸಾಧ್ಯ ಎಂದು ಚಿಂಚಣಿಯ ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.

ಶಿರಗಾಂವವಾಡಿಯಲ್ಲಿ ಗೌರಿ ಗಣೇಶ ಮಹಿಳಾ ಸಹಕಾರ ಸಂಘದ ಶಾಖೆ ಉದ್ಘಾಟಿಸಲಾಯಿತು. ಅಲ್ಲಮಪ್ರಭು ಸ್ವಾಮೀಜಿ, ಯುವ ಮುಖಂಡ ಉತ್ತಮ ಪಾಟೀಲ, ಅಭಯಕುಮಾರ ಮಗದುಮ್ಮ, ಅಶ್ವಿನಿ ಮಗದುಮ್ಮ, ಸುದರ್ಶನ ಖೋತ, ಆನಂದ ಗಿಂಡೆ, ಅನಿತಾ ಹರಗಾಪುರೆ, ಸಂಗೀತಾ ಬಾಬನ್ನವರ ಇತರರಿದ್ದರು.
ಶಿರಗಾಂವವಾಡಿಯಲ್ಲಿ ಗೌರಿ ಗಣೇಶ ಮಹಿಳಾ ಸಹಕಾರ ಸಂಘದ ಶಾಖೆ ಉದ್ಘಾಟಿಸಲಾಯಿತು. ಅಲ್ಲಮಪ್ರಭು ಸ್ವಾಮೀಜಿ, ಯುವ ಮುಖಂಡ ಉತ್ತಮ ಪಾಟೀಲ, ಅಭಯಕುಮಾರ ಮಗದುಮ್ಮ, ಅಶ್ವಿನಿ ಮಗದುಮ್ಮ, ಸುದರ್ಶನ ಖೋತ, ಆನಂದ ಗಿಂಡೆ, ಅನಿತಾ ಹರಗಾಪುರೆ, ಸಂಗೀತಾ ಬಾಬನ್ನವರ ಇತರರಿದ್ದರು.

ಸಮೀಪದ ಶಿರಗಾಂವ ವಾಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೋರಗಾಂವ ಶ್ರೀ ಗೌರಿಗಣೇಶ ಮಹಿಳಾ ಸಹಕಾರ ಸಂಘದ ಪ್ರಥಮ ಶಾಖೆ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳಿಗೆ ಸಾಲಗಾರ ಆರ್ಥಿಕ ಬೆನ್ನೆಲುಬು. ಕಾರಣ ಸಾಲಗಾರ ಬಡ್ಡಿ ಪಾವತಿಸುತ್ತಾನೆ. ಇದರಿಂದ ಸಂಸ್ಥೆ ಪ್ರಗತಿಯಲ್ಲಿದೆ. ಸಿಬ್ಬಂದಿ ಪ್ರಾಮಾಣಿಕ ಮತ್ತು ನ್ಯಾಯಯುತ ವ್ಯವಹಾರ ನಡೆಸಬೇಕು. ರಾಜಕೀಯ ರಹಿತವಾಗಿ ಸಂಘ ನಡೆಸಿದರೆ ಸಹಕಾರಿ ಕ್ಷೇತ್ರ ಪ್ರಗತಿಯತ್ತ ಸಾಗುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಅಶ್ವಿನಿ ಮಗದುಮ್ಮ ಮಾತನಾಡಿ, ಬೋರಗಾಂವ ಮತ್ತು ಸುತ್ತಮುತ್ತಲಿನ ಮಹಿಳೆಯರ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುವ ಉದ್ದೇಶದಿಂದ 2018ರಲ್ಲಿ ಗೌರಿ ಗಣೇಶ ಮಹಿಳಾ ಸಂಘ ಸ್ಥಾಪಿಸಲಾಗಿದೆ. ಸಂಸ್ಥೆ  580 ಸದಸ್ಯರು, 6.80 ಲಕ್ಷ ರೂ. ಷೇರು ಬಂಡವಾಳ, 5.40 ಕೋಟಿ ರೂ. ಠೇವಣಿ ಹೊಂದಿದೆ. ಇಲ್ಲಿಯವರೆಗೆ 3.80 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಮೀಪದ ಬಾರವಾಡ, ಗಳತಗಾ, ಪಟ್ಟಣಕುಡಿಯಲ್ಲಿ ಶೀಘ್ರದಲ್ಲಿ ಶಾಖೆ ಆರಂಭಿಸುವುದಾಗಿ ತಿಳಿಸಿದರು.

ಯುವ ಮುಖಂಡ ಉತ್ತಮ ಪಾಟೀಲ ಹಾಗೂ ಸಂಸ್ಥಾಪಕ ಅಧ್ಯಕ್ಷ ಅಭಯಕುಮಾರ ಮಗದುಮ್ಮ, ಸುದರ್ಶನ ಖೋತ, ಆನಂದ ಗಿಂಡೆ, ಸುರೇಶ ಖೋತ, ಸೋಮೇಶ ಪಾಟೀಲ, ಅರುಣ ಭೋಣೆ, ಅನಿತಾ ಹರಗಾಪುರೆ, ಸಂಗೀತಾ ಬಾಬನ್ನವರ, ಸಂಗೀತಾ ಉಚಗಾಂವೆ, ಸುರೇಖಾ ಮಲಕಾಪುರೆ, ಕಲಾವತಿ ಹರಗಾಪುರೆ, ಸುಪ್ರಿಯಾ ಗಿಂಡೆ, ತ್ರಿವೇಣಿ ಶ್ಯಾಮ್, ಸಂತೋಷ ಹಂಚನಾಳೆ, ಚಾಂದಬಿ ಮುಜಾವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net