ದಾಖಲೆ ಮಳೆಗೆ ತುಂಬಿದ ಕೆರೆಗಳು

RAIN 01
Published on

ಶಹಾಪುರ: ತಾಲೂಕಿನಲ್ಲಿ ಭಾನುವಾರ ಬೆಳಗ್ಗಿನ ಜಾವ ಸುರಿದ ಭಾರಿ ಮಳೆ ಜನರನ್ನು ಬೆಚ್ಚಿ ಬೀಳಿಸಿದೆ. ಬಡಾವಣೆಗಳು ಜಲಾವೃತಗೊಂಡರೆ, ಹಳ್ಳ-ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ.

ಖಾಸಗಿ ಪ್ರಯೋಗಾಲಯಕ್ಕೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಸಕರ್ಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನೀರು ಸಂಗ್ರಹವಾಗಿದ್ದು, ಇದಕ್ಕೆ ಹೊಂದಿಕೊಂಡಿರುವ ಮಾರ್ಗದಲ್ಲಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಬಾಪುಗೌಡ ಬಡಾವಣೆ ಹತ್ತಿರದ ಹಳ್ಳದ ಬಳಿ ನಿವೇಶನವೊಂದರಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದ ಕುಟುಂಬ ಹಳ್ಳದ ನೀರಿನ ಪ್ರವಾಹಕ್ಕೆ ಸಿಲುಕಿದರು. ಇದನ್ನು ಕಂಡ ಜೆಸ್ಕಾಂ ನೌಕಕರು ತಕ್ಷಣ ಅಗ್ನಿಶಾಮಕ ದಳದವರನ್ನು ಕರೆಸಿ ಅಪಾಯದಿಂದ ಪಾರು ಮಾಡಿದರು.

ಭೀಮರಾಯನ ಗುಡಿಯಲ್ಲಿ 89 ಮಿ.ಮೀ, ಗೋಗಿ(ಕೆ) 41.8, ದೋರನಹಳ್ಳಿ 70, ಹಯ್ಯಾಳ 30, ಹತ್ತಿಗೂಡೂರ 124, ವಡಗೇರಾ 45.0 ಮಿಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ಗೌತಮ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಸುರಪುರ ನಗರದಲ್ಲಿ 29.04, ಕಕ್ಕೇರಾ 9.04, ಹುಣಸಗಿ 11.02, ಕೆಂಭಾವಿ ವಲಯದಲ್ಲಿ 20.04 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net