ಅಭಿವೃದ್ಧಿ ಭಾರತ ಬಿಜೆಪಿಯ ಮುಂದಿನ ಗುರಿ

bjp rural programme
ನಗರದ ಶುಭಮಂಗಳಾ ಕಲ್ಯಾಣ ಮಂದಿರದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸೆಲ್ಫಿ ವಿತ್ ಬೆನಿಫಿಷರಿ ಅಭಿಯಾನ ಕಾರ್ಯಗಾರವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ ಉದ್ಘಾಟಿಸಿದರು. ಟಿ.ಡಿ.ಮೇಘರಾಜ್, ಡಾ. ಧನಂಜಯ ಸರ್ಜಿ, ಕೆ.ಜಿ.ಕುಮಾರಸ್ವಾಮಿ, ಎಂ.ಬಿ.ಹರಿಕೃಷ್ಣ, ಎಚ್.ಸಿ.ಮಾಲತೇಶ್, ರತ್ನಾಕರ್ ಶಣೈ, ಸುರೇಶ್ ಸಿಂಗನಹಳ್ಳಿ, ಆಯನೂರು ಕುಪೇಂದ್ರ, ರಾಮು, ವಿರೂಪಾಕ್ಷಪ್ಪ ಇದ್ದರು.
Published on

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರವು ಲೋಕಸಭಾ ಕ್ಷೇತ್ರಕ್ಕೆ ಹೃದಯಭಾಗ ಇದ್ದಂತೆ. ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ಬಿಜೆಪಿಗೆ ನೀಡುವ ಶಕ್ತಿಯು ಇಡೀ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಶುಭಮಂಗಳಾ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಬಿಜೆಪಿ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸೆಲ್ಫಿ ವಿತ್ ಬೆನಿಫಿಷರಿ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರ ಅವಧಿಯಲ್ಲಿ ಗ್ರಾಮಾಂತರ ಭಾಗದಲ್ಲಿ ದಾಖಲೆ ಪ್ರಮಾಣದ ಅಭಿವೃದ್ಧಿ ಕಾರ್ಯಗಳಾಗಿವೆ. ಹಿಂದಿನ ಚುನಾವಣೆಗಿಂತ ಕಳೆದ ಬಾರಿ ಅಧಿಕ ಮತಗಳು ಬಂದರೂ ಕೆಲ ಕಾಣದ ಕೈಗಳ ಕೆಲಸ ಮಾಡಿದ್ದರಿಂದ ಪಕ್ಷಕ್ಕೆ ಸೋಲಾಯಿತು. ಅದಕ್ಕೆ ಉತ್ತರವನ್ನು ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನೀಡಬೇಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ಅವಧಿಯಲ್ಲಿ ಯುಪಿಎ ಸರ್ಕಾರ ಮಾಡಿದ್ದ ಕೊಳಕು ತೊಳೆಯುವುದಕ್ಕೆ ಸಾಧ್ಯವಾಯಿತು. ಎರಡನೇ ಅವಧಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದರೆ, ಮುಂದಿನ ಅವಧಿಯಲ್ಲಿ ಭಾರತವನ್ನು ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಕೇಂದ್ರದಲ್ಲಿ ಮೋದಿ ಅವರ ಕೈ ಬಲಪಡಿಸುವ ಜತೆಗೆ ಶಿವಮೊಗ್ಗ ಕ್ಷೇತ್ರದಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ, ಡಾ. ಧನಂಜಯ ಸರ್ಜಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ, ಎಚ್.ಸಿ.ಮಾಲತೇಶ್, ಗ್ರಾಮಾಂತರ ನಿಕಟಪೂರ್ವ ಅಧ್ಯಕ್ಷ ರತ್ನಾಕರ್ ಶಣೈ, ಹಾಲಿ ಅಧ್ಯಕ್ಷ ಸುರೇಶ್ ಸಿಂಗನಹಳ್ಳಿ, ಆಯನೂರು ಕುಪೇಂದ್ರ, ರಾಮು, ವಿರೂಪಾಕ್ಷಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net