

ದೇವನಹಳ್ಳಿ: ತಾಲೂಕಿನಾದ್ಯಂತ ಇತ್ತೀಚೆಗೆ ವಿವಿಧ ಕಾರ್ಪೋರೇಟ್ ಸಂಸ್ಥೆಗಳು ಸಿಎಸ್‌ಆರ್ ಂಡ್ ಬಳಸಿಕೊಂಡು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿವೆ. ಅದರಂತೆ ಹಲವು ಸರ್ಕಾರಿ ಶಾಲೆಗಳಿಗೂ ನವೀಕೃತ ಕಟ್ಟಡ ಹೊಂದುವ ಭಾಗ್ಯ ದೊರೆತಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಕೊರಚರಪಾಳ್ಯದಲ್ಲಿ ಶಿಥಿಲಗೊಂಡಿದ್ದ ಶತಮಾನದಷ್ಟು ಹಳೆಯದಾದ ಶಾಲೆಯ ಕಟ್ಟಡವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಕೆಎಐಎಲ್) ಅಂದಾಜು 4.50 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿರುವ ಶಾಲಾ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್ ಂಡ್) ಬಳಸಿಕೊಂಡು ಕೆಎಐಎಲ್ ಎರಡು ವರ್ಷಗಳಿಂದ ಶಾಲಾ ಕಟ್ಟಡದ ನವೀಕರಣ ಕಾಮಗಾರಿ ಕೈಗೊಂಡಿತ್ತು. ಈ ಕಟ್ಟಡ ಈಗ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ನಿರ್ಮಾಣಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರಾದ ಜಿ.ಎ. ರವೀಂದ್ರ, ಕೋಮಲಾ ನಟರಾಜ್, ಎಸ್. ನಾಗೇಶ್, ಮಾಜಿ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣಪ್ಪ, ನರಸಿಂಹಮೂರ್ತಿ, ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ಅಂಜನಾ, ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಯ್ಯ, ಸಹಶಿಕ್ಷಕ ಪುಟ್ಟಸ್ವಾಮಿ, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಆರ್. ಭರತ್ ಮುಖ್ಯಶಿಕ್ಷಕಿ ಗಿರಿಜಮ್ಮ ಮತ್ತಿತರರಿದ್ದರು.
ದೇವನಹಳ್ಳಿ ಜಿಲ್ಲೆ ಮಾಡಲು ಸ್ಪಂದನೆ: ಜಿಲ್ಲಾಡಳಿತ ಭವನ ಹೊಂದಿರುವ ದೇವನಹಳ್ಳಿಯನ್ನು ಜಿಲ್ಲೆಯಾಗಿ ೋಷಿಸುವಂತೆ ಮಾಡಿಕೊಂಡಿರುವ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಬಳಿಕ ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಇರಿಸಿ, ದೇವನಹಳ್ಳಿಯನ್ನು ಜಿಲ್ಲೆಯಾಗಿ ೋಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ವಿಜಯಪುರ ಮತ್ತು ದೇವನಹಳ್ಳಿ ಪಟ್ಟಣಗಳನ್ನು ನಗರಸಭೆಗಳಾಗಿ ಮೇಲ್ದರ್ಜೆಗೆ ಏರಿಸಬೇಕು. ಅವರೆಡನ್ನೂ ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಜತೆಗೆ ದೇವನಹಳ್ಳಿಯ ತಾಲೂಕು ಕ್ರೀಡಾಂಗಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ಯುವಸಬಲೀಕರಣ ಇಲಾಖೆಗೆ ನಿರ್ದೇಶನ ನೀಡಿದೆ. ನಿಸರ್ಗ ನಾರಾಯಣಸ್ವಾಮಿ ಶಾಸಕ