

ಮೂಡಿಗೆರೆ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಥಿ ಬ್ಯಾಂಕ್ 58 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಬಿ.ಶಿವಣ್ಣ ಹಳಸೆ ತಿಳಿಸಿದರು.
ರೈತ ಭವನದಲ್ಲಿ ನಡೆದ ಬ್ಯಾಂಕ್‌ನ 89 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 1935ರಲ್ಲಿ ಸ್ಥಾಪಿತವಾದ ಬ್ಯಾಂಕ್ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ತಾಲೂಕಿನ 140 ಹಳ್ಳಿಗಳ ರೈತರಿಗೆ ವರದಾನವಾಗಿದೆ. ಈ ಸಾಲಿನಲ್ಲಿ 58.64ರೂ.ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ 25 ಡಿವಿಡೆಂಎ ನೀಡಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಥಿ ಬ್ಯಾಂಕ್‌ನಿಂದ ವಿವಿಧ ಯೋಜನೆಗಳಲ್ಲಿ ಸಾಲ ನೀಡಲಾಗಿದೆ. ಇದು 2025 ಮಾರ್ಚ್ ಅಂತ್ಯಕ್ಕೆ 1172.07 ಲಕ್ಷ ರೂ. ಆಗಿದೆ. ವಿವಿಧ ಯೋಜನೆಯಲ್ಲಿ ರೈತರಿಗೆ ಒಟ್ಟು ರೂ.11.92.41 ಲಕ್ಷ ರೂ. ಸಾಲ ನೀಡಲಾಗಿದೆ. ಸದಸ್ಯರಿಂದ ಒಟ್ಟು ರೂ.116.02 ಲಕ್ಷ ರೂ.ಠೇವಣಿ ಸಂಗ್ರಹವಾಗಿದೆ. ಈ ಸಾಲಿನಲ್ಲಿ ರೈತರಿಗೆ ವಿವಿಧ ಯೋಜನೆ ಮೂಲಕ 10 ಕೋಟಿ ರೂ. ಸಾಲ ನೀಡುವ ಗುರಿ ಹೊಂದಿದೆ ಎಂದು ತಿಳಿಸಿದರು.
ಉಪಾದ್ಯಕ್ಷ ಜಿ.ಕೆ.ದಿವಾಕರ, ನಿರ್ದೇಶಕರಾದ ಓ.ಜಿ.ರವಿ, ಹೆಚ್.ಕೆ.ಭರತ್ ಕುಮಾರ್, ಎಂ.ಕೆ.ಚಂದ್ರೇಶ್, ಎಂ.ವಿ.ಜಗದೀಶ್, ಕೆ.ಬಿ.ಗೋಪಾಲಗೌಡ, ಎಂ.ಎನ್.ಅಶ್ವತ್, ಕೆ.ಆರ್.ದೀಪಕ್, ಅಣ್ಣಪ್ಪ , ಹೆಚ್.ಎಂ.ರಚನ, ಹೆಚ್.ಸಿ.ವಿನಂತಿ, ಕೆ. ಬಿ.ಶಿವರಾಜ್, ಬ್ಯಾಂಕಿನ ವ್ಯವಸ್ಥಾಪಕ ಸಿ.ಎಂ.ಕಾರ್ತಿಕ್ ಇತರರಿದ್ದರು.