ಕ್ರೀಡೆಯಿಂದ ಕಲಿಕೆಗೆ ಬೇಕಾದ ತನ್ಮಯತೆ ವೃದ್ಧಿ

ಕ್ರೀಡೆಯಿಂದ ಕಲಿಕೆಗೆ ಬೇಕಾದ ತನ್ಮಯತೆ ವೃದ್ಧಿ
Published on

ಹೊಳೆನರಸೀಪುರ: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನಿರ್ಮಿಸುವ ಜತೆಗೆ ಛಲವನ್ನು ಮೂಡಿಸುತ್ತದೆ. ಜತೆಗೆ ಕಲಿಕೆಗೆ ಅಗತ್ಯವಾದ ತನ್ಮಯತೆ ಹೆಚ್ಚಿಸಲು ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ, ತಾಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಲು, ದೈಹಿಕ ಹಾಗೂ ಮನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತಗೊಳ್ಳದೆ ಕ್ರೀಡಾ ಚಟವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎ.ಕಾಳೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಜಾತಾ ಅಲಿ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ವಿ.ಜೆ.ಮಹಾಲಿಂಗ, ಪ್ರೌ.ದೈ.ಶಿ.ಸಂ. ಅಧ್ಯಕ್ಷ ಪಿ.ಎಲ್.ಹರೀಶ್, ಶಿಕ್ಷಕರಾದ ಎಚ್.ಎಚ್.ಕಾಂತರಾಜು, ಎಂ.ಜಗದೀಶ್, ಎಂ.ಸಿ. ಮಂಜುನಾಥ್, ಮಹೇಶಪ್ಪ, ಶಿವರಾಂ, ಎಸ್.ಉಮೇಶ್, ಸೋಮಣ್ಣಯ್ಯ, ಗಣೇಶ್, ಮಲ್ಲರಾಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net