ಅಭಿಯಂತರರು ರಾಷ್ಟ್ರೀಯ ರಂಗ ಉತ್ಸವಕ್ಕೆ ಚಾಲನೆ

17
Published on

ಮೈಸೂರು: ಎಲ್ಲ ಕಲೆಗಳು ನಮ್ಮಲ್ಲಿನ ಕೆಟ್ಟ ಅಂಶಗಳನ್ನು ಕನ್ನಡಿ ರೂಪದಲ್ಲಿ ತೋರಿಸುತ್ತವೆ ಎಂದು ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ಅಭಿಯಂತರರು ಸಂಸ್ಥೆಯ 31ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ರಂಗ ಉತ್ಸವ ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ನಾಟಕ ಕಲೆ ನಿತ್ಯ ನೂತನವಾದುದ್ದು. ಎಲ್ಲ ಕಲೆಯ ಉದ್ದೇಶವೂ ಒಂದೇ ಆಗಿದ್ದು, ಸಮಾಜದಲ್ಲಿನ ಕಟ್ಟದನ್ನು ತಿದ್ದುವು ಮೂಲಕ ಸಮಾಜವನ್ನು ಸರಿಯ ದಾರಿಯಲ್ಲಿ ಕೊಂಡೊಯ್ಯುವುದಾಗಿದೆ ಎಂದರು.

ಸಾಹಿತಿ ಎಸ್.ಜಿ. ಸಿರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಸುದರ್ಶನ, ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net