

ರಾಯಚೂರು ದೇಶದಲ್ಲಿ ದೊಡ್ಡ ಹತ್ತಿ ಮಾರುಕಟ್ಟೆ ಎನ್ನುವ ಪ್ರಖ್ಯಾತಿ ಪಡೆದ ಜಿಲ್ಲೆಯಲ್ಲಿ ಮೇಗಾ ಜವಳಿ ಪಾರ್ಕ್ ಕೈತಪ್ಪಿದ ನಂತರ ರಾಜ್ಯ ಸರ್ಕಾರ ಘೋಷನೆ ಮಾಡಿದ ಜವಳಿ ಪಾರ್ಕ್‌ಗೆ ಡೆವಲಪರ್‌ಗಾಗಿ ಟೆಂಡರ್ ಕರೆದು 69ದಿನ ಕಳೆದರು ಯಾವುದೇ ಡೆವಲಪರ್ ಆಗಮಿಸದೆ ಇರುವುದರಿಂದ ಕೈಗಾರಿಕೋದ್ಯಮದವರು ಆತಂಕಕ್ಕಿಡಾಗಿದ್ದಾರೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಾಗಿದೆ. ಅಲ್ಲದೇ ಜಿನ್ನಿಂಗ ಹಾಗೂ ಪ್ರೆಸ್ಸಿಂಗ್ ಕೈಗಾರಿಕೆಗಳು ಹೆಚ್ಚು ಹೊಂದಿರುವ ಜಿಲ್ಲೆಯಾಗಿದೆ. ಜವಳಿ ಪಾರ್ಕ್ ಸ್ಥಾಪನೆಯಾದರೆ ಈ ಭಾಗದಲ್ಲಿ ರೈತರು ಬೆಳೆಯುವ ಹತ್ತಿಗೆ ಹೆಚ್ಚಿನ ಬೆಲೆಯೂ ಬರಲಿದೆ. ಅಲ್ಲದೇ ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳ ದೊರೆಯಲಿವೆ. ಈ ಎಲ್ಲ ಕಾರಣಕ್ಕಾಗಿ ಅಭಿವದ್ಧಿ ಹೊಂದಲಿವೆ ಎಂಬ ಉದ್ದೇಶವನ್ನು ಜಿಲ್ಲೆಯ ಜನರು ಹೊಂದಿದ್ದರು.ಆದರೆ ಡೆವಲಪರ್ ಇಲ್ಲದೆ ಇರುವುದರಿಂದ ಹಿನ್ನಡೆಯಾಗಿರುವುದು ಕಂಡು ಬರುತ್ತಿದೆ.
ಎಲ್ಲಿ ನಿರ್ಮಾಣ ?
ಸರ್ಕಾರ 2022 ರ ಬಜೆಟ್‌ನಲ್ಲಿ ಒಟ್ಟು 24 ಕೋಟಿ ರೂ. ವೆಚ್ಚದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ಘೋಷಣೆ ಮಾಡಲಾಯಿತು.ಅದರಂತೆ ನಗರದ ಹೊರವಲಯದಲ ಬೀಜನಗೇರಾ ರಸ್ತೆಯಲ್ಲಿ ಸುಮಾರು 15 ಎಕರೆ ಪ್ರದೇಶವನ್ನು ಜಿಲ್ಲಾಡಳಿತ ಸ್ಥಳ ಗುರುತು ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಕಳೆದ ಅಗಸ್ಟ್ 4 ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಬೆಂಗಳೂರಿನ ಹೈಡೆಕ್ ಖಾಸಗಿ ಸಂಸ್ಥೆ ಮೂಲಕ ಮಾಸ್ಟರ್ ಡೆವಲಪರ್ ನೇಮಕಾರಿಗಾಗಿ ಟೆಂಡರ್ ಕರೆದು 69 ದಿನಗಳು ಕಳೆದರು ಇದುವರೆಗೆ ಯಾರು ಬಾರದೆ ಇರುವುದರಿಂದ ಸಮಸ್ಯೆ ಎದುರಾಗಿದೆ.
ಡೆವಲಪರ್‌ನಿಂದ ಏನು ಉಪಯೋಗ?
ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಜವಳಿ ಪಾರ್ಕ್‌ನಿಂದ ಸರ್ಕಾರ ಟೆಂಡರ್ ಮೂಲಕ ನೇರವಾಗಿ ಅನುದಾನವನ್ನು ಡೆವಲಪರ್ ಖಾತೆಗೆ ಹಾಕಲಾಗುತ್ತದೆ. ನಂತರ ಅವರು 15 ಎಕರೆ ಪ್ರದೇಶದಲ್ಲಿ ರೋಡ್,ಒಳ ಚರಂಡಿ, ವಿದ್ಯುತ್, ದಾರ ತಯಾರು,ಸಣ್ಣ ವಸ್ತ್ರಗಳ ತಯಾರು, ಸ್ಟೀಚಿಂಗ್, ಹೇಂರೆಡಿಂಗ್, ಹಾಸಿಗೆ ತಯಾರು ಸಂಧಿಸಿದಂತೆ 150 ಪೀಟ್ ಸ್ಥಳದ ಪ್ಲಾಟ್‌ಗಳ ನಿರ್ಮಾಣ ಹಾಗೂ ಇದರ ಜತೆಗೆ 5 ಎಕರೆ ಪ್ರದೇಶದಲ್ಲಿ ಜಿನ್ನಿಂಗ ಮಿಲ್ ಪ್ರಾರಂಭ ಮಾಡಿ ಸುಮಾರು 1000 ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುತ್ತಾರೆ. ಈ ಭಾಗದಲ್ಲಿ ಮೊದಲ ಬಾರಿಗೆ ಜವಳಿ ಪಾರ್ಕ್ ನಿರ್ಮಾಣವಾಗುತ್ತಿರುವುದರಿಂದ ಇಲ್ಲಿಯ ಮಾಹಿತಿ ತಿಳಿಯದೆ ಇರುವುದರಿಂದ ಯಾವುದೇ ಡೆವಲಪರ್ ಬರುತಲ್ಲವೆಂದು ಹತ್ತಿ ಖರೀದಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಜವಳಿ ಪಾರ್ಕ್ ಸ್ಥಾಪನೆಗೆ ಮುಖ್ಯವಾಗಿರುವುದು ಹತ್ತಿ ಬೆಳೆಯುವ ಪ್ರದೇಶ. ಆದರೆ ಸರ್ಕಾರ ಡೆವಲಪರ್‌ಗಾಗಿ ಟೆಂಡರ್ ಕರೆದಿದ್ದೇವೆ ನೀವೆ ಹಣ ಹೂಡಿಕೆ ಮಾಡಿ ಜವಳಿ ಪಾರ್ಕ್ ಅಭಿವೃದ್ದಿ ಮಾಡಿ ಎಂದು ಹೇಳಲಾಗುತ್ತಿದೆ.ಆದರೆ ನಮಗೆ ಮಾಡಲು ಕಷ್ಟವಾಗುತ್ತದೆ ಸರ್ಕಾರ ಜವಲಿ ಪಾರ್ಕ್ ಅಭಿವೃದ್ದಿ ಮಾಡಿಕೊಟ್ಟರೆ ನಾವು ಲೀಜ್ ನೀಡುತ್ತೇವೆ.
ವಿ.ಲಕ್ಷೀತ್ಮರೆಡ್ಡಿ ಅಧ್ಯಕ್ಷರು ಹತ್ತಿ ಗಿರಣಿಗಳ ಮಾಲೀಕರ ಸಂಘ ರಾಯಚೂರು.
ನಗರದ ಹೊರವಲಯದ ಬೀಜನಗೇರಾ ರಸ್ತೆಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಮಾಸ್ಟರ್ ಡೆವಲಪರ್ ಟೆಂಡರ್ ಕರೆದ ನಂತರ ಸಭೆ ಕರೆದಾಗ 3 ಜನ ಡೆವಲಪರ್ ಬಂದು ಸ್ಥಳ ವಿಕ್ಷೇಣೆ ಮಾಡಿದ್ದರು. ಆದರೆ ಯಾರು ಟೆಂಡರ್‌ಗೆ ಅರ್ಜಿ ಹಾಕಿಲ್ಲ. ಇವಾಗ ಟೆಂಡರ್ ಮುಗಿದಿದೆ. ಮತ್ತೋಮ್ಮೆ ಟೆಂಡರ್ ಕರೆಯಲಾಗುತ್ತದೆ.
ಹೈದಾರ್ ಖಾನ್ ಸಹಾಯಕ ನಿರ್ದೇಶಕ ಕೈಗಾರಿಕೆ ಇಲಾಖೆ ರಾಯಚೂರು