ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ : ಶಾಸಕ ಇ.ಚಂದ್ರಶೇಖರನ್ ಸಲಹೆ

New Project (23)
Published on

ಕಾಸರಗೋಡು: ಆಧುನಿಕ ಕೃಷಿ ತಂತ್ರಜ್ಞಾನಗಳ ತಳಮಟ್ಟದ ಪ್ರಸರಣ ಅಗತ್ಯವಿದೆ. ಸಣ್ಣ ರೈತರ ಬಳಿಗೂ ಆಧುನಿಕ ಕೃಷಿ ವಿಧಾನ ತಲುಪಬೇಕಿದೆ. ಆವಿಷ್ಕಾರ, ಹೊಸ ತಂತ್ರಜ್ಞಾನದ ಬಳಕೆಯಿಂದ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಿ ಎಂದು ಕಾಞಂಗಡು ಶಾಸಕ ಇ.ಚಂದ್ರಶೇಖರನ್ ಹೇಳಿದರು.

ಕಾಞಂಗಾಡಿನ ಅಜನೂರ್‌ನಲ್ಲಿ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ(ವಿಕೆಎಸ್‌ಎ) ಉದ್ಘಾಟಿಸಿ ಮಾತನಾಡಿದರು.

ಐಸಿಎಆರ್‌ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಮಾತನಾಡಿದರು. ಡಾ.ಮುಹಮ್ಮದ್ ಅಜರುದ್ದೀನ್, ಡಾ.ಸುರೇಶ್ ಬಾಬು ಪಿ.ಪಿ, ಡಾ.ರಮೇಶ್ ವಿ, ಡಾ.ರೇಣುಕಾ ವಿ. ಅವರು ಬೆಳೆ ವೈವಿಧ್ಯೀಕರಣ, ಮೀನುಗಾರಿಕೆ ಮತ್ತು ಸುಸ್ಥಿರ ಕೃಷಿ ಮಾದರಿಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿದರು. ಡಾ.ಬೆಂಜಮಿನ್ ಮ್ಯಾಥ್ಯೂ, ಡಾ.ಸರಿತಾ ಹೆಗ್ಡೆ, ಕಿರಣ್ ಮೋಯ್‌ಪಾತ್ರ, ದಿನೇಶ್ ಕುಮಾರ್ ಯಾದವ್ ಸಹಕರಿಸಿದರು. ಡಾ.ಮನೋಜ್‌ಕುವಾರ್ ಟಿ.ಎಸ್. ಸ್ವಾಗತಿಸಿದರು. ಸಂತೋಷ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net