ಸಾಲದ ಸದ್ಬಳಕೆಯೊಂದಿಗೆ ಅಭಿವೃದ್ಧಿ ಹೊಂದಿ

Develop with the proper use of credit
Published on

ಹಿರೇಕೆರೂರ: ಸ್ವಸಹಾಯ ಸಂಘದ ಸದಸ್ಯರು ಪಡೆದ ಸಾಲದ ಸರಿಯಾದ ಬಳಕೆಯೊಂದಿಗೆ ನಿಗದಿತ ಅವಧಿಯೊಳಗೆ ಮರುಪಾವತಿ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಹೇಳಿದರು.

ಪಟ್ಟಣದಲ್ಲಿ ದಿ.ಕರ್ನಾಟಕ ಸೆಂಟ್ರಲ್ ಕೋ ಆಪ್ ಬ್ಯಾಂಕ್ ಧಾರಾವಾಡ, ಕೆಸಿಸಿ ಬ್ಯಾಂಕ್ ಶಾಖಾ ಕಚೇರಿ ವತಿಯಿಂದ ಬಸವೇಶ್ವರ ಪುರುಷ ಸ್ವಸಹಾಯ ಸಂಘಕ್ಕೆ ಕಡಿಮೆ ಬಡ್ಡಿ ದರದಲ್ಲಿ ಮಂಜೂರಾದ 10 ಲಕ್ಷ ರೂ ಚೆಕ್ ಅನ್ನು ಗುರುವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಯಾವುದೇ ಬ್ಯಾಂಕ್​ಗಳು ಉತ್ತಮವಾಗಿ ಅಭಿವೃದ್ಧಿ ಹೊಂದಲು ಅಧಿಕಾರಿಗಳು, ಸಾಲಗಾರರು, ಗ್ರಾಹಕರ ಸಹಾಯ, ಸಹಕಾರ, ದಕ್ಷತೆ, ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ. ಪಡೆದಂತಹ ಸಾಲ ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿಕೊಂಡು, ಬಂದಂತಹ ಆದಾಯದಿಂದ ವೇಳೆಗೆ ಸರಿಯಾಗಿ ಮರುಪಾವತಿಸುವ ಮೂಲಕ ಆರ್ಥಿಕ ಪ್ರಗತಿ ಹೊಂದಬೇಕು. ವ್ಯವಹಾರ ಸರಿಯಾಗಿಟ್ಟುಕೊಂಡರೆ ಯಾವುದೇ ಸಮಯದಲ್ಲಿ ಬ್ಯಾಂಕ್ ನಿಮ್ಮನ್ನು ಕರೆದು ಸಾಲ ನೀಡುತ್ತದೆ ಎಂದರು.

ಬ್ಯಾಂಕ್ ವ್ಯವಸ್ಥಾಪಕಿ ಅಕ್ಕಮ್ಮ ಪಾಟೀಲ, ಬಸವೇಶ್ವರ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಶುಭಾಕರ ಹಂಪಾಳಿ, ರಾಜು ಖಾಂಡ್ಕೆ, ಪದಾಧಿಕಾರಿಗಳಾದ ಕಂಠಾಧರ ಅಂಗಡಿ, ಚಂದ್ರಶೇಖರ ಹಾದ್ರಿಹಳ್ಳಿ, ಸದಾನಂದ ಅಂಗಡಿ, ಮಲ್ಲಪ್ಪ ಮಡಿವಾಳರ, ಗಂಗಾಧರ ಬಾಗಲಕೋಟಿ, ಶಿವಕುಮಾರ ಅಂಗಡಿ, ಇಂದುಧರ ಹಳಕಟ್ಟಿ, ಸೋಮಣ್ಣ ಕೊಳ್ಳೇರ ಹಾಗೂ ಬ್ಯಾಂಕ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net