ಕಠಿಣ ಪರಿಸ್ಥಿತಿ ಎದುರಿಸುವ ಛಲ ಬೆಳೆಸಿಕೊಳ್ಳಿ

25 MDL 01
ಮುದಗಲ್ ಸರ್ಕಾರಿ ಉರ್ದು ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಪುರಸಭೆ ಸದಸ್ಯ ಎಸ್.ಆರ್.ರಸೂಲ್ ಮಾತನಾಡಿದರು. ಮುಖ್ಯಶಿಕ್ಷಕ ಶರೀಫ್ ಸಾಬ್, ನಿವೃತ್ತ ಶಿಕ್ಷಕ ಈರಣ್ಣ ಅಂಪರಗುಂದಿ ಶಿಕ್ಷಕರಾದ ನೂರ್ ಅಹಮದ್ ಕೊತ್ವಾಲ್ ಇದ್ದರು.
Published on

ಮುದಗಲ್: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಶಿಕ್ಷಕರ ಹಾಗೂ ಪಾಲಕರ ಹೆಸರಿಗೆ ಕೀರ್ತಿ ತರಬೇಕು ಎಂದು ಪುರಸಭೆ ಸದಸ್ಯ ಎಸ್.ಆರ್.ರಸೂಲ್ ಅಭಿಪ್ರಾಯಪಟ್ಟರು. ಮುದಗಲ್‌ನ ಇಬ್ರಾಹಿಂಪೂರ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭಾವನಾತ್ಮಕ ಪ್ರಪಂಚವನ್ನು ಬೆಳೆಸಿಕೊಳ್ಳುವುದರ ಮೂಲಕ ಜೀವನವನ್ನು ಸುಂದರವಾಗಿ ಇರಿಸಿಕೊಂಡು ಉತ್ತಮ ಅಂಕಗಳ ಜತೆಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ಬೆಳೆಸಿಕೊಳ್ಳಬೇಕೆಂದರು. ಪ್ರಮುಖರಾದ ಖಾಜಾ ಸಾಬ್ ಕರಡಿ, ಸೈಯದ್ ಸಾಬ್, ಹಸನ್ ಸಾಬ, ಅಬ್ದುಲ್ ಖದಿರ್ ಪಾನವಾಲೆ, ರಸೂಲ್ ಜಂಬಾಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net