ಜೀವನದಲ್ಲಿ ಸಾಧಿಸುವ ಛಲ ಬೆಳೆಸಿಕೊಳ್ಳಿ

Develop the will to achieve in life.
ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇಂಡಕ್ಷನ್​ ಪ್ರೋಗ್ರಾಂ ಹಂತ&2ರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಸ್​ಪಿ ಲಕ್ಷ$್ಮಣ ನಿಂಬರಗಿ, ಡಾ. ವಿ.ಜಿ. ಸಂಗಮ, ಡಾ. ಲೀನಾ ರಾಗಾ ಇತರರಿದ್ದಾರೆ.
Published on

ವಿಜಯಪುರ: ಪರಿಸ್ಥಿತಿ ಯಾವುದೇ ಇದ್ದರೂ ಅದು ಸಾಧನೆಗೆ ಮುಳ್ಳಾಗದಂತೆ ನೋಡಿಕೊಳ್ಳಬೇಕಾದ ಎದೆಗಾರಿಕೆ ಬೆಳೆಸಿಕೊಂಡು ಛಲದಿಂದ ಮುನ್ನುಗ್ಗಬೇಕು. ಆಗ ಯಶಸ್ಸು ತನ್ನಿಂದ ತಾನೆ ಬರುತ್ತದೆ ಎಂದು ವಿಜಯಪುರ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ$್ಮಣ ನಿಂಬರಗಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್​ ಪ್ರೋಗ್ರಾಂ ಹಂತ&2ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್​ ಕಲಾಂ ಅವರು ಎಷ್ಟೇ ಸಂಕಷ್ಟ ಸ್ಥಿತಿಯಲ್ಲಿದ್ದರೂ ಅದನ್ನು ಲೆಕ್ಕಿಸದೆ ಲೋಕವೇ ಕೊಂಡಾಡುವಷ್ಟು ಬೆಳೆದಿದ್ದು ನಮ್ಮ ಕಣ್ಣಮುಂದಿದೆ. ಇಂಥಹ ಮಹನೀಯರ ಬದುಕೇ ಸ್ಫೂರ್ತಿದಾಯಕ ಎಂದರು.

ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಮಾತನಾಡಿ, ಇಂಡನ್​ ಪ್ರೋಗ್ರಾಂನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.

ಹತ್ತು ದಿನಗಳ ಕಾರ್ಯಕ್ರಮದಲ್ಲಿ ಸಶಸ ಪಡೆಗಳಲ್ಲಿ ವೃತ್ತಿ ಬೆಳವಣಿಗೆ, ಸೈಬರ್​ ಭದ್ರತೆ, ಕಾನೂನು ಅರಿವು, ಭವಿಷ್ಯದ ಸಾರಿಗೆ ಮತ್ತು ವಿದ್ಯುತ್​ ಸುರತೆ ಅಂತಹ ವೈವಿದ್ಯಮಯ ವಿಷಯಗಳ ಒಳಗೊಂಡ ವಿಷಯ ತಜ್ಞರಿಂದ ಉಪನ್ಯಾಸ ಮತ್ತು ವಿಚಾರ ಗೋಷ್ಠಿಗಳು ನಡೆಯಲಿವೆ. ಜತೆಗೆ ಯೋಗ ಫಿಟ್ನೆಸ್​, ಕ್ರೀಡಾ ಚಟುವಟಿಕೆಯಲ್ಲಿ ತೊಡಗುವಿಕೆಯ ಕುರಿತು ಕಾರ್ಯಕ್ರಮ ಜರುಗಲಿವೆ.

ಡಾ. ಅನುರಾಧಾ ಟಂಕಸಾಲಿ ಅವರು ಇಂಡಕ್ಷನ್​ ಪ್ರೋಗ್ರಾಂ&2 ಹಂತದ ಪರಿಚಯ ಮಾಡಿದರು. ಉಪ ಪ್ರಾಚಾಯೆರ್ ಡಾ. ಲೀನಾ ರಾಗಾ ಉಪಸ್ಥಿತರಿದ್ದರು. ಡಾ. ಅಶ್ವಿನಿ ಅಂಗಡಿ ನಿರೂಪಿಸಿದರು. ಕೆ.ಎ. ಕಲಗೊಂಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net