

ಅರಕಲಗೂಡು: ಗ್ರಾಮೀಣ ಪ್ರದೇಶದ ಜನರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎ.ಮಂಜು ಹೇಳಿದರು.
ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳ ಕಡೆಗೆ ಸಂಚರಿಸುವ ಬಸ್‌ಗಳಲ್ಲಿ ಹೆಚ್ಚು ಕಲೆಕ್ಷನ್ ಆಗುವುದು ಮುಖ್ಯ. ಹೀಗಾಗಿ ಬೈಕ್‌ಗಳಲ್ಲಿ ಓಡಾಡುವುದಕ್ಕಿಂತ ಬಸ್‌ಗಳ ಪ್ರಯಾಣ ಮಾಡುವುದು ಒಳಿತು ಎಂದರು.
ಹೊಸದಾಗಿ ಸಂಚರಿಸುವ ಬಸ್ ದೊಡ್ಡಮಗ್ಗೆ, ನಿಲುವಾಗಿಲು, ಕೊರಟಿಕೆರೆ, ಬೆಳವಾಡಿ, ಜೋಡಿಗುಬ್ಬಿ, ಹೊಳೆನರಸೀಪುರ ಮಾರ್ಗವಾಗಿ ಹಾಸನಕ್ಕೆ ಸಂಚರಿಸಲಿದೆ. ಗ್ರಾಮೀಣ ಭಾಗದ ಕಡೆಗೆ ಬಸ್‌ಗ ಓಡಾಟದ ಅವಶ್ಯಕತೆ ಇದ್ದರೆ ಮತ್ತಷ್ಟು ಬಸ್‌ಗಳನ್ನು ಓಡಿಸಲು ಕ್ರಮ ವಹಿಸುವುದಾಗಿ ಹೇಳಿದರು.
ಗ್ರಾಪಂ ಅಧ್ಯಕ್ಷರಾದ ಲತಾ ಈರೇಗೌಡ, ಸದಸ್ಯ ಪ್ರಸನ್ನ ಕುಮಾರ್, ಪ್ರಕಾಶ್ ರಾಜೇಅರಸ್, ಮಾಜಿ ಸದಸ್ಯ ಮಹೇಶ್ ರಾಜೇಅರಸ್, ಲೋಕೇಶ್, ಎನ್.ಕೆ.ಈರೇಗೌಡ, ರಾಮೇಗೌಡ, ಗ್ರಾಮಸ್ಥರು ಇದ್ದರು. ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು.