ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ

27 UPBR 1
Published on

ಉಪ್ಪಿನಬೆಟಗೇರಿ: ಪಠ್ಯದ ಜತೆಗೆ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅಂದಾಗ ಬೌದ್ಧಿಕ ಮಟ್ಟ ವೃದ್ಧಿಸುತ್ತದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಪಬ್ಲಿಕ್ ಶಾಲೆ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ, ಸಂವಿಧಾನ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಿ ದಡ ಸೇರಬೇಕಾದರೆ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ವಕೀಲ ಎನ್.ಆರ್. ಬಾಳಿಕಾಯಿ ಮಾತನಾಡಿ, ಸಂವಿಧಾನದ ಪೀಠಿಕೆ ಓದಿದರೆ ಸಾಕು ಅದರ ಮಹತ್ವ ತಿಳಿಯುತ್ತದೆ. ಭಾರತದ ಸಂವಿಧಾನ ಜಗತ್ತಿನಲ್ಲಿ ದೊಡ್ಡದಾಗಿದೆ. ಇದಕ್ಕೆ ಆನೆ ಗಾತ್ರದ ಸಂವಿಧಾನ ಎಂದು ಪಾಶ್ಚಿಮಾತ್ಯರು ಕರೆಯುತ್ತಾರೆ. ಸರ್ಕಾರದ ಸಂಪೂರ್ಣ ಆಡಳಿತವನ್ನು ಹೇಳಿಕೊಡುವ ಪೀಠಿಕೆಯಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ನರೇಗಲ್ಲ, ಉಪ ಪ್ರಾಂಶುಪಾಲ ಉಮಾಕಾಂತ ಕರ್ಚಕಟ್ಟಿ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಈಶ್ವರ ಆಯಟ್ಟಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಡಾ.ಶಿವಾನಂದ ಕಲ್ಲೂರ ಕನ್ನಡ ವ್ಯಾಕರಣದ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಂಶುಪಾಲ ನಂದೀಶ ಕಾಖಂಡಕಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ನೋಟ್‌ಬುಕ್ ವಿತರಿಸಲಾಯಿತು. ಗ್ರಾಮ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಶಿವಪ್ಪ ಕುರಗುಂದ, ಶಿವಶಂಕರ ಬಾಚಗುಂಡಿ, ಶಿಕ್ಷಕರಾದ ಪಾಂಡುರಂಗ ಅಂಕಲಗಿ, ಎಂ.ಎಸ್. ಪೂಜಾರ, ಶಾಂತಾ ನಾಯ್ಕರ, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net