ಸವಾಲು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಿ

filter: 0; jpegRotation: 0; fileterIntensity: 0.000000; filterMask: 0;
ಗರುಡನಗಿರಿ ರಸ್ತೆಯಲ್ಲಿರುವ ಸೇವಾ ಸಂಕಲ್ಪ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಪರಿಕರಗಳನ್ನು ವಿತರಿಸಲಾಯಿತು. ಜಯಲಕ್ಷ್ಮೀ ರಾಘವೇಂದ್ರ, ಕೆ.ಆರ್.ಶ್ರೆಧರ್, ಕೆ.ಆರ್.ಮುರುಳೀಧರ್, ಮಯೂರಿ ನಾಗೇಶ್, ವೀಣಾ ರಂಗನಾಥ್ ಇದ್ದರು.
Published on

ಅರಸೀಕೆರೆ: ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಎದುರಾಗುವ ಸವಾಲಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸೇವಾ ಸಂಕಲ್ಪ ವಿದ್ಯಾಸಂಸ್ಥೆಯ ನಿರ್ದೇಶಕಿ ಜಯಲಕ್ಷ್ಮೀ ರಾಘವೇಂದ್ರ ಹೇಳಿದರು.


ನಗರದ ಗರುಡನಗಿರಿ ರಸ್ತೆಯಲ್ಲಿರುವ ಸೇವಾ ಸಂಕಲ್ಪ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಸೇರಿದಂತೆ ಕಲಿಕಾ ಪರಿಕರ ವಿತರಿಸಿ ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಸತತ ಪರಿಶ್ರಮದಿಂದ ಶಿಸ್ತುಬದ್ಧವಾಗಿ ಕಲಿಯಲು ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಸೋಲಿನ ಸವಾಲುಗಳನ್ನು ಧೈರ್ಯವಾಗಿ ಮೆಟ್ಟಿ ನಿಲ್ಲಲು ಸಾಧ್ಯ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್.ಶ್ರೆಧರ್ ಮಾತನಾಡಿ, ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದಾನಿಗಳು ಕೂಡ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನದಲ್ಲಿ ಉಚಿತವಾಗಿ ಲೇಖನ ಸಾಮಗ್ರಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಕೊಡುಗೆಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ನಿರ್ದೇಶಕರಾದ ಕೆ.ಎನ್.ಸತ್ಯನಾರಾಯಣ್, ಮೋಹನ್ ಕುಮಾರ್, ರಾಮಚಂದ್ರ, ಕೆ.ಆರ್.ಮುರುಳೀಧರ್, ಮಯೂರಿ ನಾಗೇಶ್, ವೀಣಾ ರಂಗನಾಥ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನಸ್ವಾಮಿ, ಶಿಕ್ಷಕರಾದ ಬಸವಂತಪ್ಪ, ಗಂಗಾಧರ್, ಲೋಕೇಶ್, ಕುಮಾರಸ್ವಾಮಿ, ಚಂದ್ರಶೇಖರ್, ದೀಪಾ, ಉದ್ಯಮಿ ನಾಗಭೂಷಣ್, ಪ್ರಗತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net