

ನರಗುಂದ: ಮಹನೀಯರ ತ್ಯಾಗ, ಬಲಿದಾನದೊಂದಿಗೆ ಕಷ್ಟಪಟ್ಟು ಗಳಿಸಿರುವ ಸ್ವಾತಂತ್ರ್ಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ತಹಸೀಲ್ದಾರ್ ಜಯಲಕ್ಷ್ಮಿ ವಸ್ತ್ರದ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೊತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಮಯ ವ್ಯರ್ಥಗೊಳಿಸದೆ ಶಿಸ್ತು, ಸಂಯಮ ಗುರಿಯೊಂದಿಗೆ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಶಿಕ್ಷಣವೇ ಸಾಧನೆಗೆ ಮೂಲ ಕಾರಣ. ಉತ್ತಮ ಶಿಕ್ಷಣ ಪಡೆದರೆ ಸುಂದರಮಯ ಜೀವನ ಅನುಭವಿಸುವುದರ ಜತೆಗೆ ಕಷ್ಟಪಟ್ಟು ಸಂಪಾದಿಸಿರುವ ಈ ಸ್ವಾತಂತ್ರ್ಯನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ನಮಗೆ ಬರುತ್ತದೆ ಎಂದರು. ಶಾಸಕ ಸಿ.ಸಿ. ಪಾಟೀಲ ಅವರು ಕಳುಹಿಸಿದ್ದ ಸಂದೇಶವನ್ನು ತಹಸೀಲ್ದಾರ್ ಜಯಲಕ್ಷ್ಮಿ ವಸ್ತ್ರದ ಅವರು ಓದಿದರು. ಆಕರ್ಷಕ ಪಥಸಂಚನಲ ಕಾರ್ಯಕ್ರಮ ಜರುಗಿತು. 2022ರಲ್ಲಿ ದೆಹಲಿ ಪರೇಡ್ಗೆ ಆಯ್ಕೆಗೊಂಡಿದ್ದ ಅಕ್ಷತಾ ಕುರಿ ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ, ತಾಪಂ ಇಒ ಮಂಜುಳಾ ಹಕಾರಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ, ಪುರಸಭೆ ಸದಸ್ಯೆ ಭಾವನಾ ಪಾಟೀಲ, ರಾಚನಗೌಡ ಪಾಟೀಲ, ಪ್ರಶಾಂತ ಜೋಶಿ, ಎನ್.ಆರ್. ನಿಡಗುಂದಿ, ಚಂಬಣ್ಣ ವಾಳದ, ಶಿವಾನಂದ ಮುತವಾಡ, ಪವಾಡೆಪ್ಪ ವಡ್ಡಿಗೇರಿ, ಶಂಕರ ಪಲ್ಟನಕರ್, ಬಸಪ್ಪ ಮಳಗಿ, ಸಿಡಿಪಿಒ ರೂಪಾ ಗಂಧದ, ಸ್ನೇಹಾ ಕೊಪ್ಪಳ, ಆನಂದ ಬನಪ್ಪನವರ ಉಪಸ್ಥಿತರಿದ್ದರು. ಎಚ್.ಎಸ್.ದಾಸರ ನಿರ್ವಹಿಸಿದರು.