ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ

KRIDAKUTA GJD
Published on

ಗಜೇಂದ್ರಗಡ: ವಿದ್ಯಾರ್ಥಿದೆಸೆಯಲ್ಲಿಯೇ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದು ಭೋವಿ ಸಮಾಜದ ತಾಲೂಕಾಧ್ಯಕ್ಷ ಯಲ್ಲಪ್ಪ ಬಂಕದ ಹೇಳಿದರು.

ಪಟ್ಟಣದ ಎಂಸಿಎಸ್ ನಂ .1 ರ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಲು ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂದಿನ ಹಂತ ತಲುಪಿ ವಲಯ, ತಾಲೂಕು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ತಮ್ಮ ಕ್ರೀಡಾ ಪ್ರತಿಭೆ ಮೆರೆಯಬಹುದು ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಕೆ. ಸರಗಣಾಚಾರಿ ಮಾತನಾಡಿ, ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡೆಯು ಸ್ಪರ್ಧೆಯಾಗಿರಬೇಕೇ ಹೊರತು ವೈಯಕ್ತಿಕ ಕಲಹಕ್ಕೆ ನಾಂದಿಯಾಗಬಾರದು ಎಂದರು. ದಕ್ಷಿಣ ವಲಯದ ಸಿಆರ್​ಪಿ ಆರ್.ಜಿ. ಮ್ಯಾಕಲ್, ಉತ್ತರ ವಲಯದ ಸಿಆರ್​ಪಿ ಕಳಕೇಶ ವನ್ನಾಲ, ಎಸ್.ಆರ್. ಅಂಗಡಿ, ಚಂದ್ರು ಕರಮುಡಿ, ವಿ.ಎ. ಹಾದಿಮನಿ, ಬಿ.ಎಸ್. ಅಣ್ಣಿಗೇರಿ, ಶ್ರೀನಿವಾಸ ನಿಲ್ಲೂರ, ರಜಾಕ್ ಹುನಗುಂದ, ರವೀಂದ್ರ ಕವಡಿಮಟ್ಟಿ, ಎಸ್.ಎಸ್. ಸೊಟ್ಟಬಸಪ್ಪನವರ, ಆರ್.ಎಸ್. ಇಟಗಿ, ಎಸ್.ಟಿ. ಪೂಜಾರ, ಎಚ್.ಆರ್. ನಿಡಗುಂದಿ, ಬಿ.ಎಸ್. ಉಣಚಗೇರಿ, ಎಸ್.ಕೆ. ಮಠದ, ಸುಜಾತ ದಿವಾಣದ, ಬಸವರಾಜ ಗುಳಗುಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net